ಕರ್ನಾಟಕ

ಕೊಡಗಿನ ನೆರೆ ಸಂತ್ರಸ್ತರಿಗೆ ಡಬಲ್​​ ಬೆಡ್​ರೂಮ್​ ಭಾಗ್ಯ: ಖಾದರ್​​ ಭರವಸೆ!

Pinterest LinkedIn Tumblr


ಬೆಂಗಳೂರು: ಇತ್ತೀಚೆಗೆ ಸಂಭವಿಸಿದ್ದ ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದ ಕೊಡಗು ಜಿಲ್ಲೆಯ ಜನಕ್ಕೆ ಮಾದರಿಯ ಮನೆಗಳನ್ನು ನಿರ್ಮಿಸಲು ಸರ್ಕಾರ ಚಿಂತಿಸಿದೆ ಎಂದು ನಗರಾಭಿವೃದ್ದಿ ಮತ್ತು ವಸತಿ ಸಚಿವ ಯುಟಿ ಖಾದರ್​​​ ಹೇಳಿದ್ದಾರೆ. ಅಲ್ಲದೇ ಈಗಿರುವ ಸಿಂಗಲ್​​ ಬೆಡ್​​​ರೂಮ್​​​ ಮನೆಗಳನ್ನು ಡಬಲ್​​ ಬೆಡ್​ರೂಮ್​​ಗಳನ್ನಾಗಿಸಲು ಸರ್ಕಾರ ನಿರ್ಧರಿಸಲಾಗಿದೆ ಎಂದು ಖಾದರ್ ಅವರು ತಿಳಿಸಿದ್ದಾರೆ.

ಇಂದು ವಿಕಾಸಸೌಧದಲ್ಲಿ ಮಾತಾಡಿದ ಅವರು, ಕೊಡಗಿನಲ್ಲಿ ಭಾರೀ ಪ್ರವಾಹದಿಂದಾಗಿ ಜನ ತಮ್ಮ ನೆಲೆಯನ್ನು ಕಳೆದುಕೊಂಡಿದ್ದಾರೆ. ನೆರೆ ಸಂತ್ರಸ್ತರಿಗೆ ಮಾದರಿ ಮನೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 101 ಕೋಟಿ ರೂ.ಗಳು ಅಗತ್ಯವಿದೆ. ಒಂದು ಒಳ್ಳೆಯ ಡಬಲ್​​ ಬೆಡ್​​ರೂಮ್​​ ಮನೆಗೆ ಕನಿಷ್ಠ 9.45 ಲಕ್ಷ ರೂಪಾಯಿಗಳು ವೆಚ್ಚವಾಗಲಿದೆ. ಈ ಯೋಜನೆಗೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದು, ಹೆಚ್ಚುವರಿ ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದರು.

ಇನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವ ಶಾಲೆ ಮತ್ತು ಮನೆಗಳ ಮೇಲೆ ಅಳವಡಿಸಿರುವ ಟವರ್​​ಗಳಿಂದ ಭಾರೀ ಸಮಸ್ಯೆಗಳು ಎದುರಾಗುತ್ತಿವೆ ಎಂದು ಜನರು ದೂರು ನೀಡಿದ್ಧಾರೆ. ಸಾಕಷ್ಟು ದೂರುಗಳು ಬಂದಿರು ಕಾರಣದಿಂದಾಗಿ ಸರ್ಕಾರ ನೂತನ ಟವರ್​​ ನೀತಿಯನ್ನು ರೂಪಿಸಲು ಮುಂದಾಗಿದೆ. ಇದರ ಪ್ರಕ್ರಿಯೆ ಶೀಘ್ರದಲ್ಲಿಯೇ ಶುರುವಾಗಲಿದ ಎಂದು ಸಚಿವ ಖಾದರ್​​​ ಅವರು ಭರವಸೆ ನೀಡಿದ್ಧಾರೆ.

ಶಾಲೆ ಮತ್ತು ವಸತಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮದಿಂದ ಮೊಬೈಲ್​​ ಟವರ್​​ ಸ್ಥಾಪಿಸಬೇಕಾಗುತ್ತದೆ. ಈ ಕುರಿತು ಡಿಸಿಎಂ ಡಾ.ಜಿ ಪರಮೇಶ್ವರ್​​ ಅವರ ಜೊತೆಗೆ ಸಮಾಲೋಚನೆ ಸಭೆಯನ್ನು ನಡೆಸಲಾಗುವುದು. ಬಳಿಕ ಒಂದು ಶಾಲೆ/ಮನೆ ಸಮೀಪ ಎಷ್ಟು ಅಂತರದಲ್ಲಿ ಟವರ್​​ ಸ್ಥಾಪಿಸಬೇಕು ಎಂದು ಚರ್ಚಿಸಲಿದ್ದೇವೆ. ಬಳಿಕ ನೂತನ ಟವರ್​​​ ನೀತಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಖಾದರ್​​ ತಿಳಿಸಿದ್ಧಾರೆ.

ರೆಡ್ಡಿ ಬಗ್ಗೆ ಮಾತನಾಡುವುದಿಲ್ಲ:​​ ಪುಣ್ಯಕೋಟಿ ಯಾರೆಂದು ಬಳ್ಳಾರಿಯ ಜನ ಲೋಕಸಭಾ ಉಪಚುನಾವಣೆಯಲ್ಲಿ ತಿಳಿಸಿದ್ದಾರೆ. ಗಾಲಿ ಜನಾರ್ದನ ರೆಡ್ಡಿ ಅವರ ಬಗ್ಗೆ ಹೆಚ್ಚು ಮಾತನಾಡಲಿಕ್ಕೆ ಹೋಗಬಾರದು. ಇದೀಗ ಒಳ್ಳೆಯದನ್ನು ಮಾತನಾಡಿದರೂ, ಕೆಟ್ಟದನ್ನು ಮಾತನಾಡಿದರೂ ನಾಯಕರಾಗುತ್ತಾರೆ. ಹೀಗಾಗಿ ಯಾರ ಬಗ್ಗೆಯೂ ಮಾತನಾಡದೇ ಸುಮ್ಮನಿರುವುದೇ ಭಾರಿ ಒಳ್ಳೆಯದು ಎನ್ನುತ್ತಾರೆ ಸಚಿವ ಯು.ಟಿ ಖಾದರ್​​ ಅವರು.

Comments are closed.