ಕರ್ನಾಟಕ

ಕಂದಮ್ಮನ ಜೊತೆ ಜೊತೆ ಬಾವಿಗೆ ಹಾರಿದ ಗೃಹಿಣಿ

Pinterest LinkedIn Tumblr


ಚಿಕ್ಕಬಳ್ಳಾಪುರ: ಮೂರು ವರ್ಷದ ಮುದ್ದು ಕಂದಮ್ಮನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅವುಲನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

26 ವರ್ಷದ ಐಶ್ವರ್ಯ ಹಾಗೂ 3 ವರ್ಷದ ಪ್ರಣೀತಾ ಮೃತರು. 4 ವರ್ಷಗಳ ಹಿಂದೆ ಬಿ.ಕೊತ್ತಕೋಟ ಗ್ರಾಮದ ಸೋದರಮಾವ ಮಂಜನಾಥ್ ನೊಂದಿಗೆ ಐಶ್ವರ್ಯ ಗೆ ವಿವಾಹ ಮಾಡಿಕೊಡಲಾಗಿತ್ತು. ಮಂಜುನಾಥ್ ಹೈದರಾಬಾದ್ ನ ಪ್ರಿಂಟಿಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ದಂಪತಿ ಹೈದರಾಬಾದ್ ನಲ್ಲಿ ಜೀವನ ಸಾಗಿಸುತ್ತಿದ್ದರು. 3 ದಿನಗಳ ಹಿಂದೆ ತವರು ಮನೆಗೆ ತನ್ನ ಮಗುವಿನ ಜೊತೆ ಬಂದ ಐಶ್ವರ್ಯ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ರೈತ ವೆಂಕಟರೆಡ್ಡಿ ಎಂಬವರ ತೋಟದಲ್ಲಿನ ಬಾವಿಗೆ ತನ್ನ ಮಗುವಿನ ಜೊತೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಬಾವಿ ಬಳಿ ಇದ್ದ ಚಪ್ಪಲಿಯನ್ನ ಕಂಡು ಬಾವಿ ಕಡೆಗೆ ರೈತ ವೆಂಕಟರೆಡ್ಡಿ ನೋಡಿದಾಗ ಬಾವಿಯಲ್ಲಿ ಐಶ್ವರ್ಯ ಹಾಗೂ ಮಗು ಬಿದ್ದಿರುವುದು ಕಂಡು ಬಂದಿದೆ. ಈ ಸಂಬಂಧ ಗುಡಿಬಂಡೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನ ಬಾವಿಯಿಂದ ಹೊರತೆಗೆದಿದ್ದಾರೆ. ಸದ್ಯ ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.