ಕರ್ನಾಟಕ

ಮಂಡ್ಯ ಬಿಜೆಪಿ ಅಭ್ಯರ್ಥಿಗೆ ಗಣನೀಯ ಮತ ಚಲಾವಣೆ: ಕಮಲ ಅರಳುವ ಸೂಚನೆ!

Pinterest LinkedIn Tumblr


ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪರಾಭವಗೊಂಡಿದೆ. ಆದರೆ ಪಕ್ಷದ ಅಭ್ಯರ್ಥಿ ಹಿಂದೆಂದಿಗಿಂತಲೂ ಅಧಿಕ ಮತ ಪಡೆದಿದ್ದು, ಜೆಡಿಎಸ್ -ಕಾಂಗ್ರೆಸ್ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿನ ಭರವಸೆ ಮೂಡಿಸಿದೆ.
ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ 80 ಸಾವಿರ ಮತಗಳಿಗಿಂತ ಮೀರುತ್ತಿರಲಿಲ್ಲ, ಆದರೆ ಈ ಬಾರಿಯ ಚುನಾವಣೆಯಲ್ಲಿ 2.44 ಲಕ್ಷ ಮತ ಪಡೆದಿರುವುದು ರಾಜಕೀಯ ವೀಕ್ಷಕರನ್ನು ದಂಗಾಗಿಸಿದೆ. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿಕೊಡುತ್ತಿದೆ.
ಕಾಂಗ್ರೆಸ್ ಭಿನ್ನಮತೀಯರು ಮತ್ತು ರೈತಸಂಘಕ್ಕೆ ಬಿಜೆಪಿ ಪರ್ಯಾಯವಾಗಿದೆ ಎಂದು ಹೇಳಲಾಗಿದೆ,ಮೇಲುಕೋಟೆ, ಮಳವಳ್ಳಿ, ಶ್ರೀರಂಗಪಟ್ಟಣ, ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 23 ಸಾವಿರ ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯ ಮಂಡ್ಯದಲ್ಲಿ ಬಿಜೆಪಿಗೆ ವರವಾಗಿದೆ, ಕೇವಲ ಮಂಡ್ಯ ಮಾತ್ರವಲ್ಲ, ಹಾಸನ, ಚಾಮರಾಜನಗರ. ಮೈಸೂರು ಮತ್ತು ಕೊಡಗು ಲೋಕಸಭೆ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಒಡಕು ಬಿಜೆಪಿಗೆ ಲಾಭವಾಗಲಿದೆ ಎಂದು ರಾಜಕೀಯ ವಿಮರ್ಶಕರ ಅಭಿಪ್ರಯವಾಗಿದೆ.
ಈ ಹಿಂದೆ ಬಿಜೆಪಿ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿತ್ತು. ವಿರೋಧ ಪಕ್ಷಗಳ ಕಾರ್ಯಕರ್ತರ ಭಿನ್ನಭಿಪ್ರಾಯ, ದ್ವೇಷ ಬಿಜೆಪಿಗೆ ಬಂಡವಾಳವಾಗಿದೆ.

Comments are closed.