ಕರ್ನಾಟಕ

ಸಕ್ರಿಯ ರಾಜಕಾರಣಕ್ಕೆ ಎಸ್​​ ಎಂ ಕೃಷ್ಣ ನಿವೃತ್ತಿ?

Pinterest LinkedIn Tumblr


ಬೆಂಗಳೂರು: ಒಂದೆಡೆ ವರ್ಷದ ಹಿಂದೆ ಕಾಂಗ್ರೆಸ್​ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಲಿದ್ದಾರೆ? ಎನ್ನಲಾಗುತ್ತಿದೆ. ಇನ್ನೊಂದಡೆ ಎಸ್​.​ಎಂ ಕೃಷ್ಣಾ ಅವರು ರಾಜಕೀಯವಾಗಿ ಮೂಲೆಗುಂಪಾಗಲು ಬಿಜೆಪಿ ನಾಯಕರೇ ಕಾರಣ ಎಂಬ ಚರ್ಚೆ ನಡೆಯುತ್ತಿದೆ.

ಐದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಕೇಂದ್ರ ಸಚಿವ ಎಸ್​ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ 2017ರ ಮಾರ್ಚ್‌ನಲ್ಲಿ ಅವರು ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಆದರೆ ದಿನ ಕಳೆಯುತ್ತಿದ್ದಂತೆ ಬಿಜೆಪಿ ನಾಯಕರು ಹಿರಿ ವಯಸ್ಸಿನ ಕೃಷ್ಣ ಅವರನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎಸ್​ ಎಂ ಕೃಷ್ಣ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದಂತೆ ರಾಜಕೀಯದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ, ಹಿರಿಯ ನಾಯಕನ ಮುಂದಿನ ನಡೆಯೇನು? ಎಂಬುದರ ಬಗ್ಗೆ ನ್ಯೂಸ್​​-18 ಕನ್ನಡಕ್ಕೆ ಮಾತ್ರ ಎಕ್ಸ್​​ಕ್ಲೂಸಿವ್​​​ ಮಾಹಿತಿ ಲಭ್ಯವಾಗಿದೆ. ಅವರ ರಾಜಕೀಯ ಮುಂದಿನ ಹೆಜ್ಜೆಗಳು ಹೇಗೆ ಇರಲಿವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..

ಮುಂಬರುವ ಡಿಸೆಂಬರ್​​ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ನಡೆಯೇನು ಎಂಬುದರ ಬಗ್ಗೆ ಎಸ್​.ಎಂ ಕೃಷ್ಣ ಮಹತ್ವದ ಘೋಷಣೆ ಮಾಡಲಿದ್ದಾರೆ. ಈ ವೇಳೆ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುತ್ತಾರೋ, ಇಲ್ಲವೇ ಬಿಜೆಪಿಯಲ್ಲೇ ಉಳಿದು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸುತ್ತಾರೋ ಮಾತ್ರ ಗೌಪ್ಯ ವಿಚಾರವಾಗಿದೆ.

ಈ ಕುರಿತು ಭಾರೀ ಗಂಭೀರವಾಗಿ ಚಿಂತಿಸಿರುವ ಎಸ್​ ಎಂ ಕೃಷ್ಣ ಅವರು, ತಮ್ಮ ಮಗಳು
ಶಾಂಭವಿ ಅವರನ್ನು ರಾಜಕರಣಕ್ಕೆ ತರುವ ಎಲ್ಲಾ ಸಾಧ್ಯತೆಗಳಿವೆ. ಎರಡನೇ ಮಗಳು ಶಾಂಭವಿ ಅವರನ್ನು ಸಕ್ರಿಯ ರಾಜಕರಣಕ್ಕೆ ಕರೆತರುವ ಬಗ್ಗೆ ಎಸ್​.ಎಂ ಕೃಷ್ಣಾ ಅವರು ಆಸಕ್ತಿ ಹೊಂದಿದ್ಧಾರೆ. ಸದ್ಯದಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದು ಎಸ್​ಎಂಕೆ ಕುಟುಂಬದಿಂದ ನ್ಯೂಸ್​​-18 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ.

ಇನ್ನು ಎಸ್​ ಎಂ ಕೃಷ್ಣ ಅವರ ಕೆಲವು ಆಪ್ತರು ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಮೋದಿ ವರ್ಚಸ್ಸಿನಿಂದಲೇ ಗೆಲ್ಲಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತು ಹಲವರು ಕಾಂಗ್ರೆಸ್​​ ಅಥವಾ ಜೆಡಿಎಸ್​ನಿಂದ ಕಣಕ್ಕಿಳಿಸಿ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಮಂಡ್ಯದಿಂದಲೇ ಗೆಲ್ಲಿಸಬಹುದು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಶಾಂಭವಿಯನ್ನು ಆಪ್ತರ ಒತ್ತಡಕ್ಕೆ ಮಣಿದು ಸಕ್ರಿಯ ರಾಜಕಾರಣಕ್ಕೆ ಕರೆತರುತ್ತಾರ, ಇಲ್ಲವೇ ಎಂಬುದು ಎಸ್​​ಎಂಕೆ ಅವರಿಗೆ ಬಿಟ್ಟ ವಿಚಾರ.

Comments are closed.