ಕರ್ನಾಟಕ

ಉತ್ತರ ಕರ್ನಾಟಕ ಬಂದ್‍‍ಗೆ ನೀಡಿದ್ದ ಕರೆಗೆ ನೀರಸ ಪ್ರತಿಕ್ರಿಯೆ

Pinterest LinkedIn Tumblr


ಬೆಂಗಳೂರು: ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಗುರುವಾರ ಉತ್ತರ ಕರ್ನಾಟಕ ಬಂದ್‍‍ಗೆ ನೀಡಿದ್ದ ಕರೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಜಾಪುರ, ರಾಯಚೂರು, ಬೀದರ್‍‍, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸುಮಾರು 13 ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳಿಂದ ಬಂದ್‍‍ಗೆ ಕರೆ ನೀಡಲಾಗಿತ್ತು. ಆದರೆ, ಇದೀಗ ಬಂದ್‍‍ಗೆ ಜನತೆ ಬೆಂಬಲ ನೀಡದೆ ಎಂದಿನಂತೆ ಜನಜೀವನ ಸಾಗಿಸುತ್ತಿದ್ದು, ಶಾಲಾ ಕಾಲೇಜುಗಳು ತೆರೆದಿವೆ.

ಬಂದ್‍‍ಗೆ ತದ್‍‍ವಿರುದ್ಧವಾಗಿ ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬಂದ್‍‍ ವಿರೋಧಿಸಿ ಪ್ರತಿಭಟನೆ ನಡೆಸಿದರು. ರಾಯಚೂರಿನಲ್ಲಿ ಉತ್ತರ ಕರ್ನಾಟಕದ ಭಾಗಕ್ಕೆ ಸಮರ್ಪಕ ಅನುಷ್ಠಾನದ ಮೂಲಕ ಇಲ್ಲಿನ ಪ್ರಗತಿಗೆ ಸರಕಾರ ಮುಂದಾಗಲಿ ಎಂದು ಪ್ರತಿಭಟಿಸಿದರು. ಆದರೆ ರಾಯಚೂರಿನಲ್ಲಿ ಬಂದ್ ಗೆ ಯಾವುದೇ ಬೆಂಬಲ ನೀಡಿಲ್ಲ.

ಬಂದ್‍‍ಗೆ ಬೆಂಬಲಿಸದ ಜಿಲ್ಲೆಗಳು: ಧಾರವಾಡ, ವಿಜಾಪುರ, ಹುಬ್ಬಳ್ಳಿ, ರಾಯಚೂರು, ಬೀದರ್‍‍, ಕಲಬುರಗಿ, ಗದಗ, ಬೆಳಗಾವಿ, ಬಳ್ಳಾರಿ ಭಾಗಗಳಲ್ಲಿ ಬಂದ್‍‍ಗೆ ಬೆಂಬಲ ನೀಡಿಲ್ಲ.

Comments are closed.