ಕರ್ನಾಟಕ

ಬ್ರಾಹ್ಮಣ ಯುವಕನಿಂದ ಅನಾಥ ಮುಸ್ಲಿಂ ಯುವತಿಯ ಮದುವೆ!

Pinterest LinkedIn Tumblr


ಕಲಬುರಗಿ: ನಗರದ ಮಹಿಳಾ ನಿಲಯದಲ್ಲಿ ವಾಸವಿದ್ದ ಅನಾಥೆ ಶಬಾನಾಳನ್ನು ಬ್ರಾಹ್ಮಣ ಸಮುದಾಯದ ವಿಕ್ರಮ್​ ಎಂಬುವವರು ಇಂದು ಮದುವೆಯಾದರು. ಈ ಮೂಲಕ ಮಹಿಳಾ ನಿಲಯ ಅಪರೂಪದ ಮದುವೆಗೆ ಸಾಕ್ಷಿಯಾಯಿತು.

ಇತ್ತೀಚೆಗೆ ಅನಾಥ ಹುಡುಗಿಯನ್ನು ಮದುವೆಯಾಗಬೇಕು ಎಂದು ವಿಕ್ರಮ್​ ತಮ್ಮ ಕುಟುಂಬಸ್ಥರೊಂದಿಗೆ ಮಹಿಳಾ ನಿಲಯಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಮಹಿಳಾ ನಿಲಯದಲ್ಲಿದ್ದ ಶಬಾನಾ ಅವನ್ನು ಇಷ್ಟಪಟ್ಟಿದ್ದರು. ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹಿರಿಯ ಅಧಿಕಾರಿಗಳಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಿಕ್ರಮ್​ ಮತ್ತು ಶಬಾನಾ ಅವರ ಮದುವೆ ನಡೆಯಿತು.

2004ರಲ್ಲಿ ಶಬಾನಾ 7 ವರ್ಷದವಳಿದ್ದಾಗ ಯಾದಗಿರಿಯ ಬಾಲಮಂದಿರಕ್ಕೆ ದಾಖಲಿಸಲಾಗಿದ್ದಳು. 18 ವರ್ಷವಾದ ಬಳಿಕ ಶಬಾನಾ ಕಲಬುರಗಿಯ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಾಗಿದ್ದಳು. ಶಬಾನಾ ಪ್ರಥಮ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾಳೆ.

Comments are closed.