ಕರ್ನಾಟಕ

ಲಿಂಗಾಯತ ಸ್ವತಂತ್ರ ಧರ್ಮ; ಸರ್ಕಾರದ ತೀರ್ಮಾನ ಆನಂದ ಉಂಟು ಮಾಡಿದೆ: ತೋಂಟದ ಸಿದ್ದಲಿಂಗ ಶ್ರೀ

Pinterest LinkedIn Tumblr

ಗದಗ: ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿರುವುದು ಬಸವಾನುಯಾಯಿಗಳಿಗೆ ಆನಂದ ಉಂಟು ಮಾಡಿದೆ ಎಂದು ತೋಂಟದ ಡಾ. ಸಿದ್ದಲಿಂಗ ಶ್ರೀಗಳು ತಿಳಿಸಿದ್ದಾರೆ.

900 ವರ್ಷಗಳ ಹಿಂದೆ ಬಸವಣ್ಣನವರು ಧರ್ಮದ ಕಲ್ಪನೆ ಬಿತ್ತಿದರು. ಧರ್ಮ, ವರ್ಗ, ವರ್ಣ ರಹಿತ ಧರ್ಮ ಕೊಟ್ಟರು. ಆದರೆ, ಕಾಲಾಂತರದಲ್ಲಿ ಹಸನಾದ ಹೊಲದಲ್ಲಿ ಕಸದ ಬೀಜ ಬಿದ್ದಹಾಗೆ ಬೆಳೆಯೇ ಕಾಣದ ಸ್ಥಿತಿ ಉಂಟಾಗಿತ್ತು. ಬಸಣ್ಣನ ಲಿಂಗಾಯತ ಧರ್ಮದ ಜತೆಗೆ ವೀರಶೈವ ಧರ್ಮ ಬಂದು ಗೊಂದಲ ಅಸಹನೆ ಸೇರಿತ್ತು.

ಕಳೆದ 6 ತಿಂಗಳಿಂದ ಸಚಿವ ಎಂ.ಬಿ, ಪಾಟೀಲ್​, ವಿನಯ ಕುಲಕರ್ಣಿ, ಬಸವರಾಜ್​ ಹೊರಟ್ಟಿ, ಜಾಮದಾರ್, ಶರಣಪ್ರಕಾಶ್ ಅವರ ಪ್ರಯತ್ನದಿಂದ ಬೀದರ್ ನಿಂದ ಬೆಂಗಳೂರುವರೆಗೆ ಲಿಂಗಾಯತ ಧರ್ಮ ಹೆಸರಲ್ಲಿ ಆಂದೋಲನ ನಡೆಯಿತು. ಇದರ ಪರಿಣಾಮವಾಗಿ ನ್ಯಾ. ನಾಗಮೋಹನ್​ ದಾಸ್​ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಈ ಎರಡು ತಿಂಗಳಲ್ಲಿ ಒಳ್ಳೆಯ ತೀರ್ಮಾನ ಹೊರಬಿದ್ದಿದೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ಬಸವಣ್ಣನೇ ಲಿಂಗಾಯತ ಧರ್ಮ ಸಂಸ್ಥಾಪಕ ಅಂತ ವರದಿಯಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದ ಲಿಂಗಾಯತ ಪ್ರತ್ಯೇಕ ಧರ್ಮದ ಸಂಬಂಧ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ತಿಳಿಸಿದರು.

Comments are closed.