ರಾಷ್ಟ್ರೀಯ

ತಾಜ್​ ಮಹಲ್​, ಮಕ್ಕಾಗಳನ್ನು ಹಿಂದು ದೇಗುಲಗಳೆಂದು ಉಲ್ಲೇಖಿಸಿದ ಹಿಂದು ಮಹಾಸಭಾ

Pinterest LinkedIn Tumblr

ಅಲಿಘಡ್(ಉತ್ತರಪ್ರದೇಶ): ವಿಶ್ವವಿಖ್ಯಾತ ತಾಜ್ ಮಹಲ್, ಮೆಕ್ಕಾ ಮತ್ತಿತರ ಮೊಘಲ್ ಯುಗದ ಸ್ಮಾರಕಗಳನ್ನು ಹಿಂದೂ ದೇವಾಲಯಗಳೆಂದು ಅಲಿಘಡ್ ಹಿಂದು ಮಹಾಸಭಾ ಉಲ್ಲೇಖಿಸುವ ಮೂಲಕ ವಿವಾದ ಸೃಷ್ಟಿಸಿದೆ.

ಹಿಂದೂ ಮಹಾಸಭಾ ತನ್ನ ಹೊಸ ವರ್ಷದ ಕ್ಯಾಲೆಂಡರ್ ನಲ್ಲಿ ತಾಜ್ ಮಹಲ್ ಅನ್ನು ತೇಜೋ ಮಹಾಲಯ ದೇವಸ್ಥಾನ, ಮೆಕ್ಕಾವನ್ನು ಮಕೇಶ್ವರ ಮಹಾದೇವ ದೇಗುಲ, ಮಧ್ಯಪ್ರದೇಶದಲ್ಲಿರುವ ಕಮಲ್ ಮೌಲಾ ಮಸೀದಿಯನ್ನು ಭೋಜಶಾಲಾ ಮತ್ತು ಕಾಶಿಯಲ್ಲಿರುವ ಜ್ಞಾನವಿಪಿ ಮಸೀದಿಯನ್ನು ವಿಶ್ವನಾಥ ದೇವಾಲಯ, ಕುತುಬ್ ಮಿನಾರ್ ಅನ್ನು ವಿಷ್ಣುಸ್ತಂಭ, ಜಾನ್ ಪುರದ ಅತಾಲಾವನ್ನು ಅತ್ಲಾದೇವಿ ದೇಗುಲ ಮತ್ತು ಅಯೋಧ್ಯಾವನ್ನು ರಾಮಜನ್ಮಭೂಮಿ ಎಂದು ಉಲ್ಲೇಖ ಮಾಡಿದೆ.

ಇಷ್ಟೇ ಅಲ್ಲದೆ, ಕುತುಬ್​ ಮಿನಾರ್​ನ್ನು ವಿಷ್ಣುಸ್ತಂಭ, ಜಾನ್​ಪುರದ ಅತಾಲಾವನ್ನು ಅತ್ಲಾ ದೇವಿ ದೇಗುಲ, ಅಯೋಧ್ಯಾವನ್ನು ರಾಮಜನ್ಮಭೂಮಿ ಎಂದು ಹೆಸರಿಸಿದೆ.

ಈ ಬಗ್ಗೆ ಮಾತನಾಡಿದ ಹಿಂದುಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್​ ಪಾಂಡೆ, ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸುವುದು ಉದ್ದೇಶ. ಸರ್ಕಾರವೂ ಈ ನಿರ್ಧಾರವನ್ನು ಒಪ್ಪಿಕೊಳ್ಳುವ ಭರವಸೆ ಇದೆ ಎಂದು ಹೇಳಿದರು.
ಅನೇಕ ಹಿಂದು ಧಾರ್ಮಿಕ ಕ್ಷೇತ್ರಗಳನ್ನು ಮುಸ್ಲಿಮರು ಮಸೀದಿಗಳನ್ನಾಗಿ ಬದಲಿಸಿದ್ದಾರೆ. ಅವುಗಳಿಗೆ ಮತ್ತೆ ಮೊದಲಿನ ಹೆಸರು ಕೊಡಬೇಕು. ಹಿಂದು ತಾಣಗಳನ್ನಾಗಿ ಪರಿವರ್ತಿಸುವುದಾಗಿ ವಾಗ್ದಾನ ಮಾಡಿದರು. ಹೊಸ ಕ್ಯಾಲೆಂಡರ್​ನಲ್ಲಿ ಉಲ್ಲೇಖವಾದ ಹೆಸರುಗಳ ಕುರಿತಂತೆ ವರ್ಶಿಣಿ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕರು ಕೂಲಂಕಷವಾಗಿ ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.

ಆಧಾರ ರಹಿತ ಘೋಷಣೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಪಿಪಿಬಿಬಿ)ನ ಇಮಾಮ್ ಇ ಈದ್ಗಾ ಮೌಲಾನಾ ಖಲೀದ್ ರಶೀದ್ ಫಿರಂಗಿ ಮಹ್ಲಿ, ಹಿಂದು ಮಹಾಸಭಾದ ಈ ಹೇಳಿಕೆ ಆಧಾರ ರಹಿತ. ಪವಿತ್ರ ಮೆಕ್ಕಾವನ್ನು ಹಿಂದು ದೇಗುಲ ಎನ್ನುತ್ತಿರುವುದು ಜಾತ್ಯಾತೀತಗೆ ವಿರುದ್ಧ ಎಂದಿದ್ದಾರೆ.

Comments are closed.