ರಾಷ್ಟ್ರೀಯ

ಆಧಾರ ರಹಿತ ಆರೋಪ ; ಗಡ್ಕರಿ, ಕಪಿಲ್ ಸಿಬಲ್ ಕ್ಷಮೆ ಕೋರಿದ ದೆಹಲಿ ಸಿಎಂ ಕೇಜ್ರಿವಾಲ್

Pinterest LinkedIn Tumblr

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಪಿಲ್ ಸಿಬಲ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯ ಕ್ಷಮೆ ಕೇಳಿದ್ದಾರೆ.

ಆಧಾರ ರಹಿತ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಅವರಲ್ಲಿ ಅರವಿಂದ್ ಕೇಜ್ರಿವಾಲ್ ಕ್ಷಮೆ ಕೇಳಿದ್ದು, ಪಂಜಾಬ್ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಬಳಿ ಕ್ಷಮೆ ಯಾಚಿಸಿದ ಬೆನ್ನಲ್ಲೇ ಕೇಜ್ರಿವಾಲ್ ಕಪಿಲ್ ಸಿಬಲ್ ಹಾಗೂ ನಿತಿನ್ ಗಡ್ಕರಿ ಅವರಲ್ಲಿ ಕ್ಷಮೆ ಕೋರಿದ್ದಾರೆ.

ವೊಡೋಫೋನ್ ಸಂಸ್ಥೆಗೆ ಸಂಬಂಧಿಸಿದಂತೆ ಕಪಿಲ್ ಸಿಬಲ್ ವಯಕ್ತಿಕ ಹಿತಾಸಕ್ತಿಗಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಪುತ್ರ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈಗ ಕಪಿಲ್ ಸಿಬಲ್ ಬಳಿಒಯೂ ಕೇಜ್ರಿವಾಲ್ ಕ್ಷಮೆ ಕೇಳಿದ್ದಾರೆ.

2014 ರಲ್ಲಿ ನಿತಿನ್ ಗಡ್ಕರಿ ಅವರನ್ನು ದೇಶದ ಅತ್ಯಂತ ಭ್ರಷ್ಟ ರಾಜಕಾರಣಿ ಎಂದಿದ್ದಕ್ಕೆ ಗಡ್ಕರಿ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈಗ ನಿತಿನ್ ಗಡ್ಕರಿ ಕೇಜ್ರಿವಾಲ್ ಕ್ಷಮೆಯನ್ನು ಒಪ್ಪಿಕೊಂಡಿದ್ದಾರೆ.

“ನನ್ನ ಹಾಗೂ ನನ್ನ ಮಗನ ವಿರುದ್ಧ ಮಾಡಿದ್ದ ಆರೋಪಗಳು ಆಧಾರ ರಹಿತ ಎಂಬುದನ್ನು ಕೇಜ್ರಿವಾಲ್ ಹಾಗೂ ಸಿಸೋಡಿಯಾ ಒಪ್ಪಿಕೊಂಡಿದ್ದಾರೆ. ಎಲ್ಲವನ್ನೂ ಮರೆತು ಮುನ್ನಡೆಯೋಣ” ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

Comments are closed.