ಕರಾವಳಿ

ಉಡುಪಿ ಶ್ರೀಕೃಷ್ಣಮಠಕ್ಕೆ ಬರುವುದಿಲ್ಲವಂತೆ ರಾಹುಲ್ ಗಾಂಧಿ!

Pinterest LinkedIn Tumblr

ಉಡುಪಿ: ಗುಜರಾತ್ ಚುನಾವಣೆಯ ಮಾದರಿಯಲ್ಲೇ ‘ಟೆಂಪಲ್ ರನ್’ ಮುಂದುವರಿಸಲಿರುವ ರಾಹುಲ್ ಗಾಂಧಿ, ಎರಡು ದಿನಗಳ ರಾಜ್ಯ ಪ್ರವಾಸದ ವೇಳೆ, ಗೋಕರ್ಣನಾಥೇಶ್ವರ ದೇವಾಲಯ, ರೋಜಾರಿಯಾ ಚರ್ಚ್ ಮತ್ತು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಆದರೆ, ಉಡುಪಿ ಕೃಷ್ಣಮಠಕ್ಕೆ ಭೇಟಿ ಮಾತ್ರ ಕೊನೆಯ ಕ್ಷಣದಲ್ಲಿ ತಪ್ಪಿದ್ದು ಇದರ ಹಿಂದೆ ಸಿಎಂ ಹಸ್ತಕ್ಷೇಪವಿದೆ ಎನ್ನಲಾಗಿದೆ.

ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 20, 21ರಂದು ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಪ್ರವಾಸದಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲದೇ ಹಲವು ಕಾರ್ಯಕ್ರಮ, ಸಂವಾದಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

ಹಿಂದಿನ ಕಾರ್ಯಕ್ರಮದ ಪ್ರಕಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದುಕೊಂಡು, ಉಡುಪಿಯ ಐಬಿ ಅಥವಾ ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ಉಳಿದುಕೊಳ್ಳುವ ಸಾಧ್ಯತೆಯಿತ್ತು. ಆದರೆ, ಪರಿಸ್ಕೃತ ಕಾರ್ಯಕ್ರಮದ ಪ್ರಕಾರ ರಾಹುಲ್, ಕೃಷ್ಣಮಠಕ್ಕೆ ಹೋಗುವ ಕಾರ್ಯಕ್ರಮ ಇಲ್ಲ. ಶೃಂಗೇರಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷ್ಣಮಠದ ಭಿನ್ನಾಭಿಪ್ರಾಯದಿಂದಾಗಿ ರಾಹುಲ್, ಉಡುಪಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಪ್ರವಾಸದ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎನ್ನುವ ಮಾಹಿತಿಯಿದೆ.

Comments are closed.