ಕರ್ನಾಟಕ

ಭಾವನಾ ಬೆಳೆಗೆರೆಗೆ ಫೇಸ್ ಬುಕ್ ನಲ್ಲಿ ಅಶ್ಲೀಲಾ ಸಂದೇಶ

Pinterest LinkedIn Tumblr


ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ, ಪತ್ರಕರ್ತ ರವಿಬೆಳಗೆರೆ ಮಗಳು ಭಾವನಾ ಬೆಳೆಗೆರೆಗೆ ಫೇಸ್ ಬುಕ್ ನಲ್ಲಿ ಅಶ್ಲೀಲಾ ಮೆಸೇಜ್ ಹಾಗೂ ಅಶ್ಲೀಲಾ ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಪ್ರದೀಪ್ ಕುಮಾರ್ ಪಾಯಲ್ ಕಿರುಕುಳ ನೀಡುತಿದ್ದ ಆರೋಪಿಯೆಂದು ಹೇಳಲಾಗಿದ್ದು ಈತ ಕಳೆದ ಕೆಲವು ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು ಇದೀಗ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತಿದ್ದನೆಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.

ಮಾತನಾಡುತ್ತಾ ಫೇಸ್ ಬುಕ್ ನಲ್ಲಿ ಫೇಸ್ ಬುಕ್ ನಲ್ಲಿ ಅಶ್ಲೀಲಾ ಚಿತ್ರ, ಮೆಸೇಜ್ ಕಳುಹಿಸುತಿದ್ದ ನನ್ನನ್ನು ಪ್ರವೋಕ್ ಮಾಡಲು ಯತ್ನಿಸುತ್ತಿದ್ದ ಆದರೆ ಅದಕ್ಕೆಲ್ಲಾ ಹೆದರಿ ಪೊಲೀಸರಿಗೆ ಕೇಸ್ ಕೊಡಲು ಹೋಗಲಿಲ್ಲ ಬದಲಾಗಿ ನನ್ನ ಹಾಗೆ ಬೇರೆ ಮಹಿಳೆಯರಿಗೆ ಈ ರೀತಿ ಆಗಬಾರದು ಎಂದು ಸೈಬರ್ ಕ್ರೈಂಗೆ ಕೇಸ್ ಕೊಡಲು ಮುಂದ್ದಾಗಿದ್ದೇನೆ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.

-ಉದಯವಾಣಿ

Comments are closed.