ಕ್ರೀಡೆ

ಮೊಬೈಲ್ ಪಡೆಯದಿದ್ದರೆ ಶಮಿ ಓಡಿ ಹೋಗುತ್ತಿದ್ದರು: ಹಸೀನ್

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಾಹನ್ ಕೌಟುಂಬಿಕ ದೌರ್ಜನ್ಯ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ಇದೀಗ ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಿರುವ ಹಸೀನ್, ಒಂದು ವೇಳೆ ಶಮಿ ಅವರ ಎರಡನೇ ಮೊಬೈಲ್ ಫೋನ್ ಪಡೆಯದಿದ್ದರೆ ಇಷ್ಟೊತ್ತಿಗೆ ಉತ್ತರ ಪ್ರದೇಶಕ್ಕೆ ಓಡಿ ಹೋಗುತ್ತಿದ್ದರು ಎಂದು ಆಪಾದಿಸಿದ್ದಾರೆ.

ಶಮಿ ಹಾಗೂ ಆತನ ಕುಟುಂಬ ಸದಸ್ಯರು ಮಾನಸಿಕ ಹಾಗೂ ದೈಹಿಕ ಹಿಂಸೆ ನಡೆಸಿದ್ದಾರೆ. ಬೇರೆ ಹೆಣ್ಣಿನ ಜತೆ ಅಕ್ರಮ ಸಂಬಂಧ ಇರಿಸಿಕೊಳ್ಳಲು ಇದೇ ಮೊಬೈಲ್ ಬಳಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಬಹಳ ಹಿಂದಿನಿಂದಲೇ ಅವರು ತಮ್ಮ ತಪ್ಪನ್ನು ಅರಿತುಕೊಳ್ಳಲು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೆ. ಈ ಮೊಬೈಲ್ ಫೋನ್ ಇಲ್ಲದಿರುತ್ತಿದ್ದರೆ ನನಗೆ ವಿಚ್ಛೇದನ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಶಮಿ ಕಾರಿನಿಂದ ಎರಡನೇ ಫೋನ್ ಪತ್ತೆ ಹಚ್ಚಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಶಮಿ ದುಬೈಗೆ ತೆರಳಿದ್ದರು. ಈ ಸಂಬಂಧ ಸಂಭಾಷಣೆಯ ಆಡಿಯೋ ಕ್ಲಿಪ್ ಸಹ ಸೆರೆ ಹಿಡಿಯಲಾಗಿದೆ.

ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಸಿದ ಬಳಿಕವಾದರೂ ಮಾಧ್ಯಮದವರು ಯಾಕೆ ವಿಚಾರಣೆ ನಡೆಸುತ್ತಿಲ್ಲ ಎಂದು ಹಸೀನ್ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿವರಗಳನ್ನು ಬಹಿರಂಗಪಡಿಸುವ ವರೆಗೂ ಶಮಿ ಅವರನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೆ. ಈಗಲೂ ಅವರು ಮರಳಿ ಬಂದರೆ ಪರಿಗಣಿಸಲಿದ್ದೇನೆ ಎಂದರು.

Comments are closed.