ಮುಂಬೈ

ಗುಜರಾತ್ ಚುನಾವಣೆಗೆ ಮುನ್ನ ರಾಹುಲ್ ಭೇಟಿಯಾಗದ್ದು ತಪ್ಪಾಯಿತು: ಹಾರ್ದಿಕ್

Pinterest LinkedIn Tumblr


ಮುಂಬಯಿ: ಗುಜರಾತ್‌ ವಿಧಾನಸಭಾ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದರೆ ರಾಜ್ಯದಲ್ಲಿ ಬಿಜೆಪಿ ಗೆಲುವನ್ನು ತಪ್ಪಿಸಬಹುದಿತ್ತು ಎಂದು ಪಾಟೀದಾರ ಮುಖಂಡ ಹಾರ್ದಿಕ್‌ ಪಟೇಲ್‌ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

”ಚುನಾವಣೆಗೆ ಮುನ್ನವೇ ರಾಹುಲ್‌ ಅವರನ್ನು ಭೇಟಿ ಮಾಡದೆ ನಾನು ತಪ್ಪು ಮಾಡಿದೆ. ಇದರಿಂದಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಇಲ್ಲವಾದರೆ, ಪ್ರತಿಪಕ್ಷಕ್ಕೆ ಪೂರ್ಣ ಬಹುಮತ ದೊರೆಯುವ ಅವಕಾಶವಿತ್ತು,” ಎಂದು ಗುಜರಾತ್‌ ಚುನಾವಣೆಯಲ್ಲಿ ಮೀನಾಮೇಷ ಎಣಿಸಿ ಕಾಂಗ್ರೆಸ್‌ಗೆ ಬೆಂಬಲಿಸಿದ ಹಾರ್ದಿಕ್‌ ಹೇಳಿದ್ದಾರೆ.

ಮುಂಬಯಿನಲ್ಲಿ ಶನಿವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ”ನಾನು ರಾಹುಲ್‌ ಅವರನ್ನು ಭೇಟಿಯಾಗಲೇ ಇಲ್ಲ. ಮಮತಾ ಬ್ಯಾನರ್ಜಿ, ನಿತೀಶ್‌ ಕುಮಾರ್‌ ಮತ್ತು ಉದ್ಧವ್‌ ಠಾಕ್ರೆ ಅವರನ್ನು ನಾನು ಬಹಿರಂಗವಾಗಿ ಭೇಟಿಯಾಗಿದ್ದೇನೆ ಎಂದರೆ, ರಾಹುಲ್‌ ಭೇಟಿಯಲ್ಲೂ ಯಾವುದೇ ಸಮಸ್ಯೆ ಇರಲಿಲ್ಲ,” ಎಂದಿದ್ದಾರೆ.

Comments are closed.