ಕರ್ನಾಟಕ

ಇನ್ಮುಂದೆ ಎಚ್ಚರ ವಹಿಸುವೆ, ಪ್ರೀತಿಸೋ ಜನರಲ್ಲಿ ಕ್ಷಮೆ ಕೇಳಿದ ನಟ ಪ್ರಕಾಶ್ ರೈ

Pinterest LinkedIn Tumblr


ಮೈಸೂರು: ಇನ್ಮುಂದೆ ನಾನು ಯಾರನ್ನಾದ್ರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವಾಪರ ತಿಳಿದು ಮಾತನಾಡುತ್ತೇನೆ. ಈ ಹಿನ್ನೆಲೆಯಲ್ಲಿ ನನ್ನನ್ನು ಪ್ರೀತಿಸುವ ಜನರ ಕ್ಷಮೆ ಕೇಳುತ್ತೇನೆ..ಇದು ನಟ ಪ್ರಕಾಶ್ ರೈ ಅವರ ಸ್ಪಷ್ಟೀಕರಣ.

ಹೌದು ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪ್ರಕರಣ ನಡೆದ ಬಳಿಕ. ಹ್ಯಾರಿಸ್ ಪುತ್ರ ನಲಪಾಡ್ ನನ್ನು ಪ್ರಕಾಶ್ ರೈ ಹೊಗಳಿರುವ ವಿಡಿಯೋವೊಂದು ಖಾಸಗಿ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗಿತ್ತು.

ಈ ವಿಡಿಯೋ ಪ್ರಸಾರವಾದ ಬಳಿಕ ಪ್ರಕಾಶ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ನಟ ಜಗ್ಗೇಶ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಿಟ್ಟಿನಲ್ಲಿ ಸೋಮವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಪ್ರಕಾಶ್ ರೈ, ನಲಪಾಡ್ ಕೇಸಲ್ಲಿ ನಿಜಕ್ಕೂ ಮುಜುಗರವಾಗಿದೆ. ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಹಣ ನೀಡಿದ್ದರು. ಈ ಕ್ಷಣದಲ್ಲಿ ನಾನು ಇಂಥ ಯುವಕರು ಇರಬೇಕು ಎಂದು ಹೇಳಿದ್ದೆ, ಆದರೆ ಆತನ ಮನಸ್ಸಲ್ಲೊಬ್ಬ ರಾಕ್ಷಸ ಇದ್ದಾನೆಂದು ಗೊತ್ತಿರಲಿಲ್ಲ ಎಂದರು.

ಇನ್ಮುಂದೆ ಯಾರನ್ನಾದರೂ ಹೊಗಳುವಾಗ ಎಚ್ಚರ ವಹಿಸುತ್ತೇನೆ. ಪೂರ್ವಾಪರ ತಿಳಿದು ಮಾತನಾಡುತ್ತೇನೆ ಎಂದು ರೈ ಹೇಳಿದರು.

-ಉದಯವಾಣಿ

Comments are closed.