ಗ್ಯಾಲಕ್ಸಿ ಎಸ್ 9 ಮತ್ತು ಗ್ಯಾಲಕ್ಸಿ ಎಸ್ 9+ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಸ್ಯಾಮ್ಸಂಗ್ ಮೊಬೈಲ್ ಕಂಪನಿ, ಬಾರ್ಸಿ ಲೋನಾದಲ್ಲಿ ‘ಮೊಬೈಲ್ ವರ್ಲ್ಡ್ ಕಾಂಗ್ರೆಸ್’ ಸಮಾರಂಭ ಆರಂಭಗೊಳ್ಳುವ ಮುನ್ನ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿವೆ.
ಹೊಸತನದಿಂದ ಕೂಡಿದ ಕ್ಯಾಮೆರಾಗಳು, ವೇರಿಯೇಬಲ್ ಅಪೆರ್ಚರ್ ಸೆನ್ಸಾರ್ ಹಾಗೂ ಗ್ಯಾಲಕ್ಸಿ ಎಸ್ 9+ ಸ್ಪೋರ್ಟ್ಸ್ ನ ಡ್ಯುಯೆಲ್ ರೇರ್ ಕ್ಯಾಮೆರಾಗಳು ಹೊಸ ಉತ್ಪನ್ನದಲ್ಲಿ ಕಂಡುಬರುವ ವಿಶೇಷ ಲಕ್ಷಣಗಳು. ಮುಖಚರ್ಯೆ ಗುರುತಿಸುವ ಮತ್ತು ಎ.ಆರ್.ಎಮೋಜೀಸ್, ಬಿಕ್ಸ್ ಬೈ ವಿಷನ್, ಎಕೆಜಿ ಟ್ಯೂನ್ ವುಳ್ಳ ಡ್ಯುಯೆಲ್ ಸ್ಪೀಕರ್ ಗಳು ಹೊಸ ಮಾಡೆಲ್ ನಲ್ಲಿ ಕಂಡುಬರುವ ಇನ್ನಿತರ ಗುಣಲಕ್ಷಣಗಳು. ಮುಂಬರುವ ಮಾರ್ಚ್ 16ರಂದು ಆಯ್ದ ಮಾರುಕಟ್ಟೆಗೆ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡಲಿದ್ದು, ಅಮೆರಿಕದಲ್ಲಿ ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭಗೊಂಡಿದೆ.
ಸದ್ಯ ಹ್ಯಾಂಡ್ ಸೆಟ್ ಗಳು ಮಿಡ್ ನೈಟ್ ಬ್ಲ್ಯಾಕ್, ಕೋರಲ್ ಬ್ಲೂ, ಲಿಲಾಕ್ ಪರ್ಪಲ್ ಮತ್ತು ಟೈಟಾಲಿಯಂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. 46,600 ರು ಗಳಿಗೆ ಗ್ಯಾಲಕ್ಷಿ ಎಸ್ 9 ದೊರೆಯುತ್ತಿದ್ದು, ಕಂತಿನಲ್ಲಿ ಪಡೆಯುವುದಾದರೆ, ಮಾಸಿಕ 1,950 ರು. ಪಾವತಿಸ ಬೇಕು. ಎಸ್ 9+ ನ ದರ 54,400 ರು. ಮಾಸಿಕ ಕಂತಿನಲ್ಲಿ 24 ತಿಂಗಳಿಗೆ ಅನುವಾಗುವಂತೆ, 2300 ರು ಪಾವತಿಸಬೇಕು.
ಎರಡೂ ಉತ್ಪನ್ನಗಳ ವಿಶೇಷತೆಯೇನೆಂದರೆ, ಪ್ರೈಮರಿ ರೇರ್ ಕ್ಯಾಮೆರಾದ ಸೆನ್ಸಾರ್ ನಲ್ಲಿ ಆ್ಯಂಪಲ್ ಲೈಟ್ ಇದ್ದಲ್ಲಿ ಎಫ್/2.4 ಲೆನ್ಸ್ ನಲ್ಲಿ ಶೂಟ್ ಮಾಡ ಬಹುದು. ಕಡಿಮೆ ಬೆಳಕಿನ ಹೊಂದಿಕೊಳ್ಳಲು ಎಫ್/1.5 ಲೆನ್ಸ್ ನಲ್ಲಿ ಶೂಟ್ ಮಾಡಲು ಸಾಧ್ಯ. ಗ್ಯಾಲಕ್ಸಿ ಎಸ್ 8ಗೆ ಹೋಲಿಸಿದರೆ, ಹೊಸ ಉತ್ಪನ್ನಗಳಿಂದ ಶೇ.28 ರಷ್ಟು ಹೆಚ್ಚು ಕ್ಲಾರಿಟಿಯಲ್ಲಿ ಶೂಟ್ ಮಾಡಲು ಸಾಧ್ಯ. ಶೂಟ್ ಮಾಡುವ ಸಂದರ್ಭ ಬರುವ ಶಬ್ದವು ಶೇ.30 ರಷ್ಟು ಕಡಿಮೆ ಇರಲಿದೆ.
ಪ್ರತೀ ಸೆಕೆಂಡಿಗೆ 960 ಫ್ರೇಮುಗಳಲ್ಲಿ ರೆಕಾರ್ಡಿಂಗ್ ಕೆಪ್ಯಾಸಿಟಿ ಹೊಂದಿದೆ. ಅಂದರೆ, ಪ್ರತೀ 0.2 ಸೆಕೆಂಡಿಗೆ ಒಂದು ಫೂಟೇಜ್. ಇದನ್ನು ಜಿಫ್ ಫಾರ್ಮೆಟ್ ನಲ್ಲಿ ಎನಿಮೀಟೆಡ್ ವಾಲ್ ಪೇಪರ್ ನಂತೆ ಫೋನ್ ಮೂಲಕ ರವಾನಿಸಲು ಸಾಧ್ಯ.