ಕರಾವಳಿ

ಮಂಗಳೂರು ವಿವಿಯ 36ನೇ ವಾರ್ಷಿಕ ಘಟಿಕೋತ್ಸವ : 97 ಮಂದಿಗೆ ಡಾಕ್ಟರೇಟ್ ಪದವಿ ಪ್ರದಾನ

Pinterest LinkedIn Tumblr

ಮಂಗಳೂರು, ಫೆಬ್ರವರಿ.26: ಮಂಗಳೂರು ವಿಶ್ವವಿದ್ಯಾನಿಲಯದ 36ನೇ ವಾರ್ಷಿಕ ಘಟಿಕೋತ್ಸವವು ಸೋಮವಾರ ವಿವಿ ಆವರಣದಲ್ಲಿರುವ ಮಂಗಳಾ ಆಡಿಟೋರಿಯಂನ ಮಂಗಳಗಂಗೋತ್ರಿಯಲ್ಲಿ ಜರಗಿತು. ಸಿಂಗಾಪುರ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಕ್ಷ ಪದ್ಮಶ್ರೀ ಪ್ರೊ.ಸುಬ್ರ ಸುರೇಶ್ ಅವರು ಘಟಿಕೋತ್ಸವ ಭಾಷಣ ಮಾಡಿದರು.

ಶಿಕ್ಷಣ, ತಂತ್ರಜ್ಞಾನ ವೈಯಕ್ತಿಕ ಮತ್ತು ಸಮಾಜದ ಅಭಿವೃದ್ದಿಯೊಂದಿಗೆ ದೇಶದ ಪ್ರಗತಿಗೆ ಬಳಕೆಯಾಗಲಿ ಬಳಕೆಯಾಗಲಿ.ದೇಶದಲ್ಲಿ ನಾಲ್ಕನೆ ಕೃಗಾರಿಕಾ ಕ್ರಾಂತಿ 4.0 ಜಾರಿಯಾಗುತ್ತಿರುವ ಸಂದರ್ಬದಲ್ಲಿ ತಂತ್ರಜ್ಞಾನ ಮತ್ತು ಮಾನವೀಯತೆಯ ನಡುವೆ ಸಮತೋಲನದ ಅಭಿವೃದ್ಧಿ ಸಾಧಿಸಬೇಕಾಗಿದೆ.

ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಸಿದೆ. ಜೊತೆಗೆ ಸಾಕಷ್ಟು ಜನರ ವೃತ್ತಿಯನ್ನು ಕಿತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ನಕಾರಾತ್ಮಕ ರೀತಿಯ ಬೆಳವಣಿಗೆ ಆಗದಂತೆ ಎಚ್ಚರ ವಹಿಸಬೇಕು ಎಂದು ಪ್ರೊ.ಸುಬ್ರ ಸುರೇಶ್ ಅವರು ಹೇಳಿದರು.

ಸಮಾರಂಭದಲ್ಲಿ ಡಾ.ಸುಬ್ರ ಸುರೇಶ್ ಅವರಿಗೆ ಗೌರವ ಡಾಕ್ಟರೇಟ್, ಮಂಗಳೂರು ವಿಶ್ವವಿದ್ಯಾನಿಲಯದಿಂದ 97 ಮಂದಿಗೆ ಡಾಕ್ಟರೇಟ್ ಪದವಿ (ಕಲೆ-17, ವಿಜ್ಞಾನ 74, ವಾಣಿಜ್ಯ-04, ಶಿಕ್ಷಣ-02), 45 ಮಂದಿಗೆ ಚಿನ್ನದ ಪದಕ ಮತ್ತು 75 ಮಂದಿಗೆ ನಗದು ಬಹುಮಾನ, ವಿವಿಧ ಕೋರ್ಸುಗಳ 242 ರ್ಯಾಂಕ್ಗಳಲ್ಲಿ ಪ್ರಥಮ ರಾಂಕ್ ಪಡೆದ 65 ಮಂದಿಗೆ ರ್ಯಾಂಕ್ ಪ್ರಮಾಣ ಪತ್ರ (ಸ್ನಾತಕೋತ್ತರ ಪದವಿ-48 ಮತ್ತು ಪದವಿ-17: ಕಲೆ-17, ವಿಜ್ಞಾನ ಮತ್ತು ತಂತ್ರಜ್ಞಾನ-33, ವಾಣಿಜ್ಯ-10, ಶಿಕ್ಷಣ-02, ಸ್ನಾತಕೋತ್ತರ ಡಿಪ್ಲೊಮಾ-03) ಪ್ರದಾನ ಮಾಡಲಾಯಿತು.

ಮಂಗಳೂರು ವಿವಿ ಕುಲಪತಿ ಡಾ.ಕೆ.ಭೈರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕುಲಸಚಿವ ಎ.ಎಂ.ಖಾನ್ ಹಾಗೂ ವಿವಿಧ ವಿಭಾಗ ದ ಮುಖ್ಯಸ್ಥರು, ಅಕಾಡಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಕುಲಸಚಿವ ನಾಗೇಂದ್ರ ಪ್ರಕಾಶ್ ಸ್ವಾಗತಿ ಸಿದರು.

Comments are closed.