ಕರ್ನಾಟಕ

ಜೆಡಿಎಸ್‌ ಮೊದಲ ಪಟ್ಟಿಯಲ್ಲಿ ಅನಿತಾ, ಪ್ರಜ್ವಲ್‌ ಹೆಸರು ಇಲ್ಲ

Pinterest LinkedIn Tumblr


ಬೆಂಗಳೂರು: ಜೆಡಿಎಸ್‌ ಮೊದಲ ಹಂತದಲ್ಲಿ ಬಿಡುಗಡೆ ಮಾಡಿರುವ 126 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಸೇರಿದಂತೆ ಹಾಲಿ 31 ಶಾಸಕರಿಗೂ ಟಿಕೆಟ್‌ ನೀಡಲಾಗಿದೆ.

ಮಂಡ್ಯ ಸಂಸದ ಸಿ.ಎಸ್‌.ಪುಟ್ಟರಾಜು ಅವರಿಗೆ ಮೇಲುಕೋಟೆ ಕ್ಷೇತ್ರದಿಂದ ಟಿಕೆಟ್‌ ಘೋಷಿಸಲಾಗಿದೆ. ವಿಧಾನಪರಿಷತ್‌ನ ಮಾಜಿ ಸದಸ್ಯ ಪ್ರೊ.ಎಚ್‌.ಸಿ. ನೀರಾವರಿ ಅವರಿಗೆ ಕುಷ್ಠಗಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.

ಅನಿತಾಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದ ಚನ್ನಪಟ್ಟಣ, ಪ್ರಜ್ವಲ್‌ ರೇವಣ್ಣ ಸ್ಪರ್ಧಿಸಲಿದ್ದಾರೆ ಎನ್ನಲಾದ ರಾಜರಾಜೇಶ್ವರಿ ನಗರದ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಆದರೆ, ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡಲು ಬಯಸಿದ್ದ ಮತ್ತೂಂದು ಕ್ಷೇತ್ರವಾದ ಹಾಸನದ ಬೇಲೂರಿಗೆ ಅಭ್ಯರ್ಥಿ ಘೋಷಿಸಲಾಗಿದೆ.

ಬಂಡಾಯ ಶಾಸಕರ ಕ್ಷೇತ್ರಗಳ ಪೈಕಿ ನಾಗಮಂಗಲಕ್ಕೆ ಸುರೇಶ್‌ಗೌಡ, ಮಾಗಡಿಗೆ ಎ.ಮಂಜು, ಶ್ರೀರಂಗಪಟ್ಟಣಕ್ಕೆ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ.

ಎಚ್‌.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತಾದರೂ ರಾಮನಗರದಿಂದ ಟಿಕೆಟ್‌ ನೀಡಲಾಗಿದ್ದು, ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದ ದೇವರಹಿಪ್ಪರಗಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಬಂದಿದ್ದ ಎ.ಎಸ್‌.ಪಾಟೀಲ್‌ ನಡಹಳ್ಳಿ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಉಳಿದಂತೆ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರಿಗೆ ಹುಣಸೂರು, ಆನಂದ್‌ ಆಸ್ನೋಟಿಕರ್‌ಗೆ ಕಾರವಾರ, ಮಂಜುನಾಥಗೌಡ ಅವರಿಗೆ ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈಗ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ಅಭಿಷೇಕ್‌ ಎಂಬುವರಿಗೆ ಟಿಕೆಟ್‌ ನೀಡಿದ್ದು, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ.

ಮೈಸೂರಿನ ಚಾಮರಾಜ ಕ್ಷೇತ್ರಕ್ಕೆ ವಿಶ್ರಾಂತ ಕುಲಪತಿ ಕೆ.ಎಸ್‌.ರಂಗಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಗನ್‌ಮ್ಯಾನ್‌ ಆಗಿದ್ದ ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

1.ಅಥಣಿ-ಗಿರೀಶ್‌ ಭೂತಾಳೆ,
2.ಬೆಳಗಾವಿ ಗ್ರಾಮೀಣ-ಶಿವನಗೌಡ ಪಾಟೀಲ್‌
3.ಬೈಲಹೊಂಗಲ- ಶಂಕರ ಮಾಳಗಿ
4.ರಾಮದುರ್ಗ- ಜಾವೇದ್‌
5.ತೇರದಾಳ- ಬಸವರಾಜು ಕಣ್ಣೂರು
6.ಜಮಖಂಡಿ-ತೌಫಿಕ್‌
7.ಬಾದಾಮಿ-ಹನುಮಂತ ಮಾವಿನ ಮರದ್‌
8.ಮುದ್ದೇಬಿಹಾಳ- ಎ.ಎಸ್‌.ಪಾಟೀಲ್‌ ನಡಹಳ್ಳಿ
9.ಬಸವನಬಾಗೇವಾಡಿ- ಅಪ್ಪುಗೌಡ ಪಾಟೀಲ್‌ ಮನಗೊಳಿ
10.ನಾಗಠಾಣ- ದೇವಾನಂದ ಚೌಹಾಣ್‌
11.ಇಂಡಿ- ಬಿ.ಡಿ.ಪಾಟೀಲ್‌
12.ಸಿಂಧಗಿ- ಮನಗೊಳಿ
13.ಜೇವರ್ಗಿ- ಕೇದಾರ ಲಿಂಗಯ್ಯ
14.ಸುರಪುರ-ರಾಜಾ ಕೃಷ್ಣ ನಾಯಕ್‌
15.ಶಹಪುರ- ಅಮೀನ್‌ರೆಡ್ಡಿ
16.ಯಾದಗಿರಿ- ಎ.ಸಿ.ಕಡಲೂರ್‌
17.ಗುರುಮಿಟ್ಕಲ್‌-ನಾಗನಗೌಡ
18.ಚಿಂಚೋಳಿ-ಸುಶೀಲಾ ಬಾಯಿ ಬಿ.ಕೊರವಿ
19.ಕಲಬುರಗಿ ದಕ್ಷಿಣ- ಬಸವರಾಜ ದಿಗ್ಗಾವಿ
20.ಕಲಬುರಗಿ ಉತ್ತರ -ನಾಸೀರ್‌ ಉಸ್ತಾದ್‌
21.ಆಳಂದ- ಸೂರ್ಯಕಾಂತ ಕೂರಳ್ಳಿ
22.ಹುಮ್ನಾಬಾದ್‌- ನಾಸಿರ್‌ ಹುಸೇನ್‌
23.ಬೀದರ್‌ ದಕ್ಷಿಣ- ಬಂಡೆಪ್ಪ ಕಾಶಂಪುರ್‌
24.ಮಾನ್ವಿ-ರಾಜಾ ವೆಂಕಟಪ್ಪ ನಾಯಕ್‌
25.ದೇವದುರ್ಗ- ವೆಂಕಟೇಶ ಪೂಜಾರಿ
26.ಲಿಂಗಸಗೂರು- ಸಿದ್ದು ಬಂಡಿ
27.ಮಸ್ಕಿ- ರಾಜಾ ಸೋಮನಾಥ ನಾಯಕ್‌
28.ಕನಕಗಿರಿ- ಮಂಜುಳಾ ಡಿ.ಎಂ.ರವಿ
29.ಯಲಬುರ್ಗ- ಈರಣ್ಣಗೌಡ ಪೊಲೀಸ್‌ ಪಾಟೀಲ
30.ಕುಷ್ಠಗಿ- ಎಚ್‌.ಸಿ.ನೀರಾವರಿ
31.ಸಿಂಧನೂರು-ನಾಡಗೌಡ
32.ನವಲಗುಂದ- ಎನ್‌.ಎಚ್‌.ಕೋನರೆಡ್ಡಿ
33.ಕುಂದಗೋಳ- ಮಲ್ಲಿಕಾರ್ಜುನ ಅಕ್ಕಿ
34.ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌- ರಾಜಣ್ಣ ಕೊರವಿ
35.ಕಾರವಾರ- ಆನಂದ್‌ ಆಸ್ನೋಟಿಕರ್‌
36.ಕುಮುಟಾ- ಪ್ರದೀಪ್‌ ನಾಯಕ್‌
37.ಭಟ್ಕಳ-ಇನಾಯತುಲ್ಲಾ
38ಸಿರಸಿ- ಶಶಿಭೂಷಣ ಹೆಗಡೆ
39.ಯಲ್ಲಾಪುರ- ರವೀಂದ್ರ ನಾಯಕ್‌
40.ಹಾವೇರಿ- ಸಂಜಯ್‌ ಡಾಂಗೆ
41.ಹಿರೇಕೆರೂರು- ಸಿದ್ದಪ್ಪ
42.ರಾಣಿ ಬೆನ್ನೂರು-ಶ್ರೀಪಾದ್‌ ಸಾಹುಕಾರ್‌
43.ಸಂಡೂರು-ವಸಂತಕುಮಾರ್‌
44.ಕೂಡ್ಲಿಗಿ- ಎಂ.ಟಿ.ಬೊಮ್ಮಣ್ಣ
45.ಮೊಳಕಾಳೂ¾ರು- ಎತ್ತಿನ ಹಟ್ಟಿಗೌಡರ್‌
46.ಚಳ್ಳಕೆರೆ -ರವೀಶ್‌
47.ಚಿತ್ರದುರ್ಗ- ಕೆ.ಸಿ.ವೀರೇಂದ್ರ
48.ಹಿರಿಯೂರು-ಯಶೋಧರ್‌
49.ಹೊಳಕ್ಕೆರೆ-ಶ್ರೀನಿವಾಸ ಗದ್ದಿಗೆ
50.ಹರಿಹರ – ಎಚ್‌.ಎಸ್‌.ಶಿವಶಂಕರ್‌
51.ಚೆನ್ನಗಿರಿ- ಹೂದಿಗೆರೆ ರಮೇಶ್‌
52.ಮಾಯಕೊಂಡ-ಶಿಲ್ಪಾ ನಾಯಕ್‌
53.ಶಿವಮೊಗ್ಗ ಗ್ರಾಮಾಂತರ -ಶಾರದಾ ಪೂರ್ಯ ನಾಯಕ್‌
54.ಭದ್ರಾವತಿ-ಅಪ್ಪಾಜಿಗೌಡ
55.ಶಿವಮೊಗ್ಗ- ನಿರಂಜನ್‌
56.ತೀರ್ಥಹಳ್ಳಿ- ಮಂಜುನಾಥಗೌಡ
57.ಶಿಕಾರಿಪುರ- ಬಳಿಗಾರ್‌
58.ಸೊರಬ-ಮಧು ಬಂಗಾರಪ್ಪ
59.ಬೈಂದೂರು-ರವಿ ಶೆಟ್ಟಿ
60.ಉಡುಪಿ- ಬಿಡ್ತಿ ಗಂಗಾಧರ ಭಂಡಾರಿ
61.ಶೃಂಗೇರಿ- ವೆಂಕಟೇಶ್‌ ಗೋವಿಂದೇಗೌಡ
62.ಮೂಡಿಗೆರೆ- ಬಿ.ಬಿ.ನಿಂಗಯ್ಯ
63.ಚಿಕ್ಕಮಗಳೂರು-ಹರೀಶ್‌
64.ಕಡೂರು- ವೈ.ಎಸ್‌.ವಿ.ದತ್ತ
65.ಚಿಕ್ಕನಾಯಕನಹಳ್ಳಿ-ಸುರೇಶ್‌ಬಾಬು
66.ತಿಪಟೂರು-ಲೋಕೇಶ್ವರ್‌
67.ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
68.ಕುಣಿಗಲ್‌- ಡಿ.ನಾಗರಾಜಯ್ಯ
69.ತುಮಕೂರು ನಗರ- ಗೋವಿಂದರಾಜು
70.ತುಮಕೂರು ಗ್ರಾಮಾಂತರ- ಗೌರಿ ಶಂಕರ್‌
71.ಕೊರಟಗೆರೆ-ಸುಧಾಕರ್‌ಲಾಲ್‌
72.ಗುಬ್ಬಿ-ಶ್ರೀನಿವಾಸ್‌
73.ಸಿರಾ-ಸತ್ಯನಾರಾಯಣ
74.ಪಾವಗಡಿ-ತಿಮ್ಮರಾಯಪ್ಪ
75.ಮಧುಗಿರಿ- ವೀರಭದ್ರಯ್ಯ
76.ಚಿಕ್ಕಬಳ್ಳಾಪುರ- ಬಚ್ಚೇಗೌಡ
77.ಶಿಡ್ಲಘಟ್ಟ- ರಾಜಣ್ಣ
78.ಚಿಂತಾಮಣಿ- ಜೆ.ಕೆ.ಕೃಷ್ಣಾರೆಡ್ಡಿ
79.ಬಾಗೇಪಲ್ಲಿ- ಮನೋಹರ್‌
80.ಶ್ರೀನಿವಾಸಪುರ- ವೆಂಕಟಶಿವಾರೆಡ್ಡಿ
81.ಕೆಜಿಎಫ್- ಭಕ್ತ ವತ್ಸಲಂ
82.ಬಂಗಾರಪೇಟೆ-ಮಲ್ಲೇಶ್‌
83.ಮಾಲೂರು-ಮಂಜುನಾಥ್‌ಗೌಡ
84.ಕೆ.ಆರ್‌.ಪುರಂ-ಗೋಪಾಲ್‌
85.ಬ್ಯಾಟರಾಯನಪುರ-ಚಂದ್ರಣ್ಣ
86.ಯಶವಂತಪುರ-ಜವರಾಯಿಗೌಡ
87.ದಾಸರಹಳ್ಳಿ- ಮಂಜುನಾಥ್‌
88.ಮಹಾಲಕ್ಷ್ಮಿ ಲೇ ಔಟ್‌- ಗೋಪಾಲಯ್ಯ
89.ಹೆಬ್ಟಾಳ-ಹನುಮಂತೇಗೌಡ
90.ಸರ್ವಜ್ಞನಗರ- ಅನ್ವರ್‌ ಷರೀಫ್
91.ಗಾಂಧಿನಗರ- ನಾರಾಯಣಸ್ವಾಮಿ
92.ಬಸವನಗುಡಿ- ಬಾಗೇಗೌಡ
93.ಪದ್ಮನಾಭನಗರ- ಗೋಪಾಲ್‌
94.ಬಿ.ಟಿ.ಎಂ.ಲೇ ಔಟ್‌- ದೇವದಾಸ್‌
95.ದೇವನಹಳ್ಳಿ- ಪಿಳ್ಳಮುನಿಶಾಮಪ್ಪ
96.ದೊಡ್ಡಬಳ್ಳಾಪುರ- ಮುನೇಗೌಡ
97.ನೆಲಮಂಗಲ-ಡಾ.ಶ್ರೀನಿವಾಸಮೂರ್ತಿ
98.ರಾಮನಗರ- ಎಚ್‌.ಡಿ.ಕುಮಾರಸ್ವಾಮಿ
99.ಮಾಗಡಿ -ಮಂಜು
100ಮಳವಳ್ಳಿ- ಅನ್ನದಾನಿ
101.ಮದ್ದೂರು- ಡಿ.ಸಿ.ತಮ್ಮಣ್ಣ
102.ಮೇಲುಕೋಟೆ-ಸಿ.ಎಸ್‌.ಪುಟ್ಟರಾಜು
103.ಶ್ರೀರಂಗಪಟ್ಟಣ-ರವೀಂದ್ರ ಶ್ರೀಕಂಠಯ್ಯ
104.ನಾಗಮಂಗಲ-ಸುರೇಶ್‌ಗೌಡ
105.ಕೆ.ಆರ್‌.ಪೇಟೆ- ನಾರಾಯಣಗೌಡ
106.ಶ್ರವಣಬೆಳಗೊಳ- ಸಿ.ಎನ್‌.ಬಾಲಕೃಷ್ಣ
107.ಅರಸೀಕೆರೆ- ಶಿವಲಿಂಗೇಗೌಡ
108.ಹಾಸನ -ಎಚ್‌.ಎಸ್‌.ಪ್ರಕಾಶ್‌
109.ಹೊಳೇನರಸೀಪುರ -ಎಚ್‌.ಡಿ.ರೇವಣ್ಣ
110.ಅರಕಲಗೂಡು- ಎ.ಟಿ.ರಾಮಸ್ವಾಮಿ
111.ಸಕಲೇಶಪುರ- ಎಚ್‌.ಕೆ.ಕುಮಾರಸ್ವಾಮಿ
112.ಬೇಲೂರು-ಲಿಂಗೇಶ್‌
113.ಮಡಿಕೇರಿ- ಜೀವಿಜಯ
114.ವಿರಾಜಪೇಟೆ- ಸಂಕೇಶ್‌ಪೂವಯ್ಯ
115.ಪಿರಿಯಾಪಟ್ಟಣ- ಮಹದೇವ
116.ಕೆ.ಆರ್‌.ನಗರ-ಸಾ.ರಾ.ಮಹೇಶ್‌
117.ಹುಣಸೂರು-ಎಚ್‌.ವಿಶ್ವನಾಥ್‌
118.ಚಾಮುಂಡೇಶ್ವರಿ- ಜಿ.ಟಿ.ದೇವೇಗೌಡ
119.ಚಾಮರಾಜ- ಪ್ರೊ.ಕೆ.ಎಸ್‌.ರಂಗಪ್ಪ
120.ನರಸಿಂಹರಾಜ- ಅಬ್ದುಲ್ಲಾ
121.ಕೃಷ್ಣರಾಜ- ಮಲ್ಲೇಶ್‌
122.ವರುಣಾ- ಅಭಿಷೇಕ್‌
123.ಎಚ್‌.ಡಿ.ಕೋಟೆ- ಚಿಕ್ಕಣ್ಣ
124.ಮುಳಬಾಗಿಲು- ಸಮೃದ್ಧಿ ಮಂಜುನಾಥ್‌
125.ಟಿ.ನರಸೀಪುರ- ಅಶ್ವಿ‌ಣ್‌ಕುಮಾರ್‌
126.ಹಳಿಯಾಳ- ಕೆ.ಆರ್‌.ರಮೇಶ್‌

-ಉದಯವಾಣಿ

Comments are closed.