ಕ್ರೀಡೆ

ನಾಯಕ ಕೊಹ್ಲಿಗೆ ಗಾಯದ ಸಮಸ್ಯೆ?

Pinterest LinkedIn Tumblr


ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 28 ರನ್‌ಗಳ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ.

ಮೊದಲು ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್ 72 ರನ್‌ಗಳ ಅಮೋಘ ಇನ್ನಿಂಗ್ಸ್ ಕಟ್ಟಿದರೆ ಬಳಿಕ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಐದು ವಿಕೆಟುಗಳನ್ನು ಪಡೆಯುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.

ಅತ್ತ ಏಕದಿನ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸುವ ಮೂಲಕ ಮಿಂಚಿರುವ ನಾಯಕ ವಿರಾಟ್ ಕೊಹ್ಲಿ 26 ರನ್‌ಗಳ ಮಹತ್ವದ ಇನ್ನಿಂಗ್ಸ್ ಕಟ್ಟಿದ್ದರು. 20 ಎಸೆತಗಳನ್ನು ಎದುರಿಸಿದ ವಿರಾಟ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿದ್ದವು.

ಈ ನಡುವೆ ಗಾಯದ ಆತಂಕ್ಕೊಳಗಾಗಿರುವ ನಾಯಕ ಕೊಹ್ಲಿ, ಭಾರತದ ಫೀಲ್ಡಿಂಗ್ ವೇಳೆ ಬಹುತೇಕ ಸಮಯ ಮೈದಾನದಿಂದ ಹೊರಗುಳಿದಿದ್ದರು.

ಈ ಬಗ್ಗೆ ಭಾರತದ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಸ್ವತ: ಕ್ಯಾಪ್ಟನ್ ಕೊಹ್ಲಿ, ಮೊದಲು ಬ್ಯಾಟಿಂಗ್ ಮಾಡುತ್ತಿರುವಾಗ ಸಿಂಗಲ್ ಗಳಿಸುತ್ತಿರಬೇಕಾದರೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು ಎಂದಿದ್ದಾರೆ.

ಬಳಿಕ ಸ್ನಾಯು ಸೆಳೆತದ ಭೀತಿಗೊಳಗಾಗಿರುವ ಕೊಹ್ಲಿ ಮುಂಜಾಗ್ರತಾ ಕ್ರಮವಾಗಿ ಮೈದಾನವನ್ನು ತೊರೆದು ಚೆಕಪ್ ಮಾಡಿಸಿದ್ದರು.

ಇದೀಗ ಸಂಪೂರ್ಣ ಫಿಟ್ನೆಸ್ ಮರಳಿ ಪಡೆದು ದ್ವಿತೀಯ ಟ್ವೆಂಟಿ-20ನಲ್ಲೂ ಆಡುವ ಭರವಸೆಯನ್ನು ಹೊಂದಿದ್ದಾರೆ.

Comments are closed.