ಮದ್ದೂರು: ಅಂಬರೀಶ್ ಮಂಡ್ಯ ಜಿಲ್ಲೆಗೆ ಬಾಸ್ ಆದ್ರೆ ಆಗಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಚುನಾವಣಾ ಜವಾಬ್ದಾರಿಯನ್ನು ಯಾರು ಬೇಕಾದರೂ ತೆಗೆದುಕೊಳ್ಳಲಿ. ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕೆನ್ನುವುದು ನನ್ನ ಅಭಿಲಾಷೆ ಎಂದು ಶಾಸಕ ಚೆಲುವರಾಯಸ್ವಾಮಿ ಹೇಳಿದರು. ಅಂಬರೀಶ್ ತವರೂರು ದೊಡ್ಡ ರಸಿನಕೆರೆಯಲ್ಲಿ ನಡೆದದ್ದು ಖಾಸಗಿ ಕಾರ್ಯಕ್ರಮ.
ಅಂಬರೀಶ್ ಚಿತ್ರರಂಗದ ದೊಡ್ಡ ಕಲಾವಿದರೆಂದು ದೇವೇ ಗೌಡರು ಹಾಗೂ ಡಿ.ಸಿ.ತಮ್ಮಣ್ಣನವರು ಸನ್ಮಾನಿಸಿರಬಹುದು. ಇದರಿಂದ ಯಾವ ಸಂದೇಶವೂ ಹೋಗಲ್ಲ. ಇದಕ್ಕೆ ರಾಜಕೀಯ ಬಣ್ಣ ಬೆರೆಸುವುದು ಸರಿಯಲ್ಲ. ಕಾವೇರಿ ಹಾಗೂ ಮಹದಾಯಿ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚಿ ಮಾತನಾಡಲೇ ಇಲ್ಲ ಎಂದು ಇದೇ ವೇಳೆ ಕಿಡಿ ಕಾರಿದರು.
-ಉದಯವಾಣಿ