ಕರ್ನಾಟಕ

ಭಾರತೀಯ ಯೋಧರ ನೂತನ ವಿಶ್ವ ದಾಖಲೆ; ಒಂದೇ ಬೈಕ್ ನಲ್ಲಿ 58 ಜನ ಪ್ರಯಾಣ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ಒಂದನ್ನು ನಿರ್ಮಾಣ ಮಾಡಿದ್ದಾರೆ. 58 ಯೋಧರು ಒಂದೇ ಬೈಕ್ ನಲ್ಲಿ ಪ್ರಯಾಣಿಸುವ ಮೂಲಕ ಸಾಹಸ ಮೆರೆದಿದ್ದಾರೆ. ಆರ್ಮಿ ಸರ್ವೀಸ್‌ ಕೋರ್‌ ಟಾರ್ನಡೋಸ್‌ ತಂಡವು ಈ ದಾಖಲೆ ಮಾಡಿದೆ.

ಕ್ಯಾಪ್ಟನ್‌ ಬಿನ್ನಿ ಶರ್ಮಾ ನೇತೃತ್ವದ ತಂದವು ಸುಬೇದಾರ್‌ ರಾಮ್‌ಪಾಲ್‌ ತಯಾರಿಸಿದ್ದ ಬೈಕಿನಲ್ಲಿ ಪ್ರಯಾಣ ಮಾಡಿದ್ದರು. ಈ ಹಿಂದೆ ಒಂದೇ ಬೈಕ್ ನಲ್ಲಿ 54 ಮಂದಿ ಪ್ರಯಾಣಿಸಿರುವುದು ವಿಶ್ವ ದಾಖಲೆ ಎನಿಸಿತ್ತು. ಇದೀಗ ಭಾರತೀಯ ಯೋಧರು 58 ಮಂದಿ ಪ್ರಯಾಣಿಸುವ ಮೂಲಕ ಹಳೆ ದಾಖಲೆಯನ್ನು ಮುರಿದು ನೂತನ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.

Comments are closed.