ಬೆಂಗಳೂರು: ರಾಜ್ಯದಲ್ಲಿ 100 ಸಿಸಿ ಸಾಮರ್ಥ್ಕಕ್ಕಿಂತ ಕಡಿಮೆ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧಿಸಿ ಆದೇಶ ಹೊರಡಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮೈಸೂರಿನಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆ 100 ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಬೈಕ್ ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಆದರೆ ಈ ನಿರ್ಧಾರವನ್ನು ಪ್ರಶ್ನಿಸಿ ಹೋಂಡಾ, ಟಿವಿಎಸ್ ಕಂಪನಿ ಹೈಕೋರ್ಟ್ ಮೊರೆ ಹೋಗಿದ್ದವು. ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೇ ಮೋಟಾರು ವಾಹನ ನಿಯಮಾವಳಿ ಬದಲಾವಣೆಗೆ ಹೈಕೋರ್ಟ್ ಅವಕಾಶ ನೀಡಿದೆ.
ಅಸೋಸಿಯೇಷನ್ ಆಫ್ ಇಂಡಿಯಾ 100 ಸಿಸಿ ಬೈಕ್‌ಗಳಲ್ಲಿ ಹಿಂಬದಿ ಸವಾರರಿಗೆ ಅವಕಾಶ ನೀಡುತ್ತಿತ್ತು. ಇದೇ ಕಾರಣದಿಂದಾಗಿ 100 ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಿಸಿ ಇರುವ ಬೈಕ್‌ಗಳಲ್ಲೂ ಹಿಂಬದಿ ಸವಾರರಿಗೆ ಅವಕಾಶ ಕಲ್ಪಿಸಲಾಗಿತ್ತು. 2 ಸೀಟು ಎಂದು ನಮೂದಿಸಿ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಹೊಸ ಬೈಕ್‌ಗಳು 100 ಹಾಗೂ ಅದಕ್ಕಿಂತ ಕಮ್ಮಿ ಸಿಸಿ ಇದ್ದರೆ ಅದರಲ್ಲಿ ಕೇವಲ ಓರ್ವನ ಸವಾರಿಗೆ ಅವಕಾಶ ಸಿಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.
-ಉದಯವಾಣಿ