ರಾಷ್ಟ್ರೀಯ

ಖ್ಯಾತ ಹಿಂದಿ ಸಾಹಿತಿ ಕೃಷ್ಣಾ ಸೋಬ್ಟಿಗೆ ಈ ವರ್ಷದ ಜ್ಞಾನಪೀಠ ಪ್ರಶಸ್ತಿ

Pinterest LinkedIn Tumblr


ಹೊಸದಿಲ್ಲಿ: ಖ್ಯಾತ ಹಿಂದಿ ಸಾಹಿತಿ ಕೃಷ್ಣಾ ಸೋಬ್ಟಿ ಅವರನ್ನು ಈ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜ್ಞಾನಪೀಠ ಆಯ್ಕೆ ಮಂಡಳಿ ಶುಕ್ರವಾರ ಘೋಷಿಸಿದೆ. 53ನೇ ಜ್ಞಾನಪೀಠ ಪ್ರಶಸ್ತಿ ಇದಾಗಿದೆ.

1925ರಲ್ಲಿ ಗುಜರಾತ್‌ನಲ್ಲಿ ಜನಿಸಿದ ಸೋಬ್ಟಿ (92) ಸದ್ಯ ಪಾಕಿಸ್ತಾನದಲ್ಲಿದ್ದಾರೆ. ದಿಟ್ಟ ಹಾಗೂ ಆಧುನಿಕ ಪಾತ್ರಗಳನ್ನು ಕತೆಗಳಲ್ಲಿ ಚಿತ್ರಿಸುವ ಮೂಲಕ ಬರಹ ಶೈಲಿಯಲ್ಲಿ ಹಲವಾರು ರೀತಿಯ ಪ್ರಯೋಗಗಳನ್ನು ಸೋಬ್ಟಿ ಮಾಡಿದ್ದಾರೆ.

ಹಿಂದಿ, ಉರ್ದು ಹಾಗೂ ಪಂಜಾಬಿ ಸಂಸ್ಕೃತಿಯಿಂದ ಪದ್ಮಭೂಷಣ ಪುರಸ್ಕೃತೆ ಸೋಬ್ಟಿಯ ಭಾಷೆ ಪ್ರಭಾವ ಹೊಂದಿದೆ. ಭಾರತ-ಪಾಕಿಸ್ತಾನ ವಿಭಜನೆ, ಪುರುಷ-ಮಹಿಳೆಯ ಸಂಬಂಧ, ಬದಲಾದ ಭಾರತೀಯ ಸಮಾಜ, ಕುಸಿಯುತ್ತಿರುವ ಮಾನವೀಯ ಮೌಲ್ಯಗಳು ಮುಂತಾದ ವಸ್ತುಗಳನ್ನು ಹಿರಿಯಜ್ಜಿ ಸೋಬ್ಟಿಯ ಬರಹದಲ್ಲಿ ಕಾಣಬಹುದು.

ಅವರ ‘ದಾರ್‌ ಸೆ ಬಿಚ್ಚುಡಿ’, ‘ಮಿತ್ರೋ ಮರ್ಜನಿ’, ‘ಜಿಂದಗಿನಾಮಾ’, ‘ಗುಜರಾತ್‌ ಪಾಕಿಸ್ತಾನ್‌ ಸೆ ಗುಜರಾತ್‌ ಹಿಂದೂಸ್ತಾನ್‌’ ಇತ್ಯಾದಿ ಕೃತಿಗಳು ಜನಪ್ರಿಯವಾಗಿವೆ. ಹಲವಾರು ಕೃತಿಗಳು ಬೇರೆ ಭಾರತೀಯ ಭಾಷೆಗಳೇ ಅಲ್ಲದೆ, ಸ್ವೀಡಿಶ್‌, ಇಂಗ್ಲಿಷ್‌, ರಷ್ಯನ್‌ ಭಾಷೆಗಳಿಗೆ ಭಾಷಾಂತರವಾಗಿವೆ.

Comments are closed.