ರಾಷ್ಟ್ರೀಯ

ಪೊಲೀಸ್‌ ದಂಪತಿ ಮಗಳ ಮೇಲೆ 3 ಗಂಟೆ ಸತತ ಅತ್ಯಾಚಾರ!

Pinterest LinkedIn Tumblr


ಭೋಪಾಲ್‌: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹೃದಯ ಭಾಗದಲ್ಲೇ ಪೊಲೀಸ್‌ ದಂಪತಿಗಳ ಮಗಳ ಮೇಲೆ ಕಾಮುಕರು ಮೂರು ಗಂಟೆಗಳ ಕಾಲ ಸತತ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳವಾರ ಘಟನೆ ನಡೆದಿದ್ದು ಯುವತಿಯ ಅಪ್ಪ ಭದ್ರತಾ ಪಡೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯ ನಿರ್ವಹಸುತ್ತಿದ್ದಾರೆ, ತಾಯಿ ಸಿಐಡಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರದ ರಸ್ತೆ ಹಾಗೂ ರೈಲು ಹಳಿಯ ಬಳಿಯೇ ಈ ಘಟನೆ ನಡೆದಿದೆ. ನಾಗರಿಕ ಸೇವಾ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ಯುವತಿ ಕೋಚಿಂಗ್ ಕ್ಲಾಸ್ ಮುಗಿಸಿ, ವಿದಿಶಾಗೆ ತೆರಳಲು ಹಬೀಬ್ಜಂಗ್‌ ರೈಲು ನಿಲ್ದಾಣಕ್ಕೆ ಬರುತ್ತಿದ್ದಳು.

ಸಂಜೆ ಏಳು ಗಂಟೆಗೆ ಗೋಲು ಬಹಾರಿ ಛದರ್‌ ಎಂಬಾತ ಆಕೆಯನ್ನು ಅಡ್ಡಗಟ್ಟಿ ಆಕೆಯ ಕೈ ಎಳೆದಿದ್ದಾನೆ. ಅದಕ್ಕೆ ಪ್ರತಿರೋಧ ಒಡ್ಡಿದಾಗ ಆತನ ಸೋದರ ಅಮರ್‌ ಗುಂಟು ಮತ್ತಿಬ್ಬರು ಸ್ನೇಹಿತರನ್ನು ಕರೆದು ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಇವರಿಂದ ತಪ್ಪಿಸಿಕೊಳ್ಳಲು ಆಕೆ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾಳೆ. ಈ ವೇಳೆ ಆಕೆಯ ಕೈಕಾಲುಗಳನ್ನು ಕಟ್ಟಿ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಆಕೆಯ ಮೇಲೂ ಕಲ್ಲು ಎಸೆದಿದ್ದಾರೆ.

ಬಳಿಕ ಗೋಲು ಗುಟ್ಕ ಮತ್ತು ಸಿಗರೇಟು ಹೊಡೆಯಲು ಹೋಗುತ್ತೇನೆ ಎಂದು ಅಮರ್‌ಗೆ ಹೇಳಿ ಹೋಗಿದ್ದಾನೆ. ಈತನ ಬಳಿ ಸಂತ್ರಸ್ಥೆ ಬಟ್ಟೆ ನೀಡುವಂತೆ ಗೋಗರೆದಿದ್ದಾಳೆ. ಆತ ಬಟ್ಟೆ ನೀಡಿದ್ದಾನೆ ಆದರೆ ತನ್ನೊಂದಿಗೆ ಮತ್ತೆ ಇಬ್ಬರನ್ನು ಕರೆತಂದು ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಾದ ಬಳಿಕ 10 ಗಂಟೆಗೆ ಆಕೆಯನ್ನು ಮನೆಗೆ ಹೋಗಲು ಬಿಟ್ಟಿದ್ದಾರೆ. ಆದರೆ ಮೊಬೈಲ್‌, ಚಿನ್ನದ ಕಿವಿಯೋಲೆ ಇತರೆ ಆಭರಣಗಳನ್ನು ನೀಡುವಂತೆ ಹೇಳಿ ಬಳಿಕ ಆಕೆಯನ್ನು ಬಿಟ್ಟಿದ್ದಾರೆ.

ದೂರು ನಿರಾಕರಿಸಿ ಅವಮಾನ ಮಾಡಿದ ಪೊಲೀಸ್‌!

ತನ್ನ ಮೇಲಾದ ಸಾಮೂಹಿಕ ಅತ್ಯಾಚಾರವನ್ನು ಆಕೆ ತಂದೆಗೆ ಹೇಳಿದ್ದು ಬುಧವಾರ ಮುಂಜಾನೆ ಯುವತಿ ಹಾಗು ಪೋಷಕರು ಮೊದಲಿಗೆ ಎಂಪಿ ನಗರ ಪೊಲೀಸರ ಬಳಿ ತೆರಳಿದ್ದಾರೆ. ಆದರೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ಬದಲಾಗಿ ಹಬೀಬ್ಜಂಗ್‌ ಪೊಲೀಸ್‌ ಠಾಣೆಗೆ ತರಳುವಂತೆ ಹೇಳಿದ್ದಾನೆ. ಅಲ್ಲಿ ದೂರು ನೀಡಿದ ವೇಳೆ ಪೊಲೀಸ್‌ ಸಿಬ್ಬಂದಿ ಈ ಪ್ರಕರಣ ಹಬೀಬ್ಜಂಗ್‌ ಜಿಆರ್‌ಪಿ ಪೊಲೀಸರಿಗೆ ನೀಡಬೇಕು ಹೇಳಿದ್ದಾರೆ.

ಮೂರನೇ ಪೊಲೀಸ್‌ ಠಾಣೆಗೆ ಬಂದಿಳಿದ ಪೋಷಕರಿಗೆ ಮತ್ತೊಂದು ಆಘಾತ ಕಾದಿತ್ತು. ದೂರು ಸ್ವೀಕರಿಸಲು ನಿರಾಕರಿಸಿದ ಅಧಿಕಾರಿ ಇದೊಂದು ಸಿನಿಮಾ ಕಥೆ ತರ ಇದೆ ಎಂದು ಹೇಳಿ ಅವಮಾನ ಮಾಡಿದ್ದಾನೆ.

ಆದರೆ ಹಬೀಬ್ಜಂಗ್‌ನಿಂದ ಬರುತ್ತಿದ್ದ ವೇಳೆ ಅಮರ್‌ ಮತ್ತು ಗೊಲುವನ್ನು ನೋಡಿದ ಪೋಷಕರು ಕೂಡಲೇ ಇಬ್ಬರನ್ನೂ ಹಿಡಿದ ಪೊಲೀಸ್‌ ಪೋಷಕರು ಹಬೀಬ್ಜಂಗ್‌ ಜಿಆರ್‌ಪಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವಿಚಾರ ಬಯಲಾಗುತ್ತಿದ್ದಂತೆ ಎಚ್ಚೆತ್ತ ಇಲಾಖೆ ಎರಡೂ ಪೊಲೀಸ್‌ ಠಾಣೆಯ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಶಾಸನ ತರುವ ಘೋಷಣೆಯನ್ನು ಸಿಎಂ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಪ್ರಕರಣಗಳು ವರದಿಯಾಗಿವೆ.ಅಲ್ಲದೇ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

Comments are closed.