ಕರ್ನಾಟಕ

ಪ್ರಧಾನಿ ಭೇಟಿ ಹಿನ್ನಲೆ:ಭಾನುವಾರ ಧರ್ಮಸ್ಥಳಕ್ಕೆ ಬರಬೇಡಿ!

Pinterest LinkedIn Tumblr


ಬೆಂಗಳೂರು: ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ 24 ಗಂಟೆಗಳ ಕಾಲ ಭಕ್ತಾದಿಗಳಿಗೆ ಮಂಜುನಾಥ ಸ್ವಾಮಿಯ ದರ್ಶನ ಸಾಧ್ಯವಿಲ್ಲ.

ಪ್ರಧಾನಿ ಭೇಟಿ ನೀಡುವ ಮುನ್ನಾ ದಿನ 28ರ ಅಪರಾಹ್ನ 2 ಗಂಟೆಯಿಂದ 29 ರ ಮಧ್ಯಾಹ್ನ 2 ಗಂಟೆಯ ತನಕ ಶ್ರೀ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ಇದರಿಂದ ಭಕ್ತಾಧಿಗಳಿಗಾಗುವ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

-ಉದಯವಾಣಿ

Comments are closed.