ಕರ್ನಾಟಕ

ಕೋಲ್ಕತಾ: ರೊಹಿಂಗ್ಯಾಗಳ ಪರ 17 ಮುಸ್ಲಿಂ ಸಂಘಟನೆಗಳ ರ‍್ಯಾಲಿ

Pinterest LinkedIn Tumblr


ಕೋಲ್ಕತಾ: ನಗರದಲ್ಲಿ ಮಂಗಳವಾರ 17ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಆಗ್ರಹಿಸಿ ಬೃಹತ್‌ ರ‍್ಯಾಲಿ ನಡೆಸಿದ್ದಾರೆ.

ರ‍್ಯಾಲಿ ನಡೆಸಿದ ವೇಳೆ ದೇಶದಲ್ಲಿರುವ ರೊಹಿಂಗ್ಯಾಗಳನ್ನು ಗಡಿಪಾರು ಮಾಡಬಾರದು ಅವರಿಗೆ ಆಶ್ರಯ ಮುಂದುವರಿಸಬೇಕು, ಮಾನವೀಯ ದೃಷ್ಟಿಯಿಂದ ಇನ್ನಷ್ಟು ರೊಹಿಂಗ್ಯಾಗಳಿಗೆ ದೇಶದಲ್ಲಿ ಆಶ್ರಯ ನೀಡಬೇಕು ಎಂದು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.

ಪ್ರತಿಭಟನೆಗೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದು ‘ಮಮತಾಗೆ ಅಷ್ಟು ಕಾಳಜಿ ಇದ್ದಲ್ಲಿ 50 ಮಂದಿ ರೊಹಿಂಗ್ಯಾಗಳಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಲಿ ಮತ್ತು ಪರಿಣಾಮಗಳನ್ನು ಎದುರಿಸಲಿ, ಆಕೆ ರೊಹಿಂಗ್ಯಾಗಳ ನಾಯಕಿಯಾಗಲಿ’ ಎಂದು ಕಿಡಿಕಾರಿದೆ.

-ಉದಯವಾಣಿ

Comments are closed.