ಕರ್ನಾಟಕ

ನೈಸರ್ಗಿಕವಾಗಿ ದೇಹದ ತೂಕ ಇಳಿಸುವ ಮಾರ್ಗ

Pinterest LinkedIn Tumblr

ಮಂಗಳೂರು: ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು, ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ನಂತೆಯೂ ಸೇವಿಸಬಹುದು.

ಕ್ಯಾರೆಟ್ ಡಯಟ್- ನೈಸರ್ಗಿಕವಾಗಿ ತೂಕ ಇಳಿಸುವ ಮಾರ್ಗ
1. ಬೆಳಗ್ಗೆ: ಬ್ರೇಕ್ ಫಾಸ್ಟ್ ಗೆ ಕ್ಯಾರೆಟ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇವಿಸಬಹುದು. ಜೊತೆಗೆ ಒಂದು ಮೊಟ್ಟೆಯನ್ನೂ ಸೇವಿಸಬಹುದು.
2. ಮಧ್ಯಾಹ್ನ: ಟೋಸ್ಟೆಡ್ ಬ್ರೆಡ್ ಜೊತೆ ತುರಿದ ಕ್ಯಾರೆಟ್, ಟೊಮೆಟೊ, ಉಪ್ಪು ಮತ್ತು ಮೆಣಸನ್ನು ಬೆರೆಸಿ ತಿನ್ನಬೇಕು.
3. ರಾತ್ರಿ: ರಾತ್ರಿ ಊಟಕ್ಕೆ ಕ್ಯಾರೆಟ್ ಮತ್ತು ಬೇಳೆ ಬೆರೆಸಿ ತಯಾರಿಸಿದ ಸೂಪನ್ನು ಸೇವಿಸಬೇಕು ಮತ್ತು ಒಂದು ಕಪ್ ಕೆಂಪಕ್ಕಿ ಅನ್ನವನ್ನು ಮೊಸರಿನ ಜೊತೆ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ.

ಕ್ಯಾರೆಟ್ ಬಗ್ಗೆ ಇನ್ನೂ ತಿಳಿಯಿರಿ:
1. ಕ್ಯಾರೆಟ್ ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧವಿರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
2. ಕ್ಯಾರೆಟ್ ನಲ್ಲಿ 10 % ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ. ಇವೆಲ್ಲವೂ ಆರೋಗ್ಯಕ್ಕೆ ಹಿತವನ್ನುಂಟುಮಾಡುತ್ತದೆ.
3. ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗು ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.
4.ಮಧ್ಯಾಹ್ನ ಮತ್ತು ರಾತ್ರಿ ಲಘು ಊಟದ ನಂತರ ಕ್ಯಾರೆಟ್ ತಿಂದರೆ 3-4 ಕೆ.ಜಿ ತೂಕ ಇಳಿಸಿಕೊಳ್ಳುವುದು ಸಾಧ್ಯವಿದೆ.

Comments are closed.