ಕರ್ನಾಟಕ

ಸಮಯ ಕಳೆದು ಮದುವೆಯಾದರೆ ಸಮಸ್ಯೆಗಳು ಎದುರಾಗುವ ಸಾದ್ಯತೆ ಹೆಚ್ಚು..

Pinterest LinkedIn Tumblr

ಮಂಗಳೂರು: ಜೀವನ ಒಂದು ಹಂತಕ್ಕೆ ಬಂದ ನಂತರವೇ ಮದುವೆ…ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವಕ,ಯುವತಿಯರು ಅನುಸರಿಸುತ್ತಿರುವ ಸೂತ್ರವಿದು. ಮದುವೆಯ ನಂತರವೂ ತಂದೆ ತಾಯಿಗಳ ಮೇಲೆ ಅವಲಂಬಿತರಾಗಿರುವುದನ್ನು ಇಷ್ಟಪಡದವರು,ಮದುವೆಯ ನಂತರ ಅನಿರೀಕ್ಷಿತವಾದ ಸಮಸ್ಯೆಗಳು ಎದುರಾದರೂ…ಆರ್ಥಿಕವಾಗಿ ಸಬಲರಾಗಿದ್ದು ಪರಿಸ್ಥಿತಿಗಳನ್ನು ಎದುರಿಸಲು,ಜೀವನದಲ್ಲಿ ಉತ್ತಮ ನೆಲೆ ಕಂಡುಕೊಂಡ ಮೇಲೆ ಮದುವೆ ಮಾಡಿಕೊಳ್ಳಬೇಕೆಂಬ ವಿಷಯಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುವುದು. ಇದರಿಂದಾಗಿ ಅನೇಕ ಮಂದಿ 30-35 ವರ್ಷಗಳು ಕಳೆದ ನಂತರವೇ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಜೀವನದಲ್ಲಿ ಉತ್ತಮ ನೆಲೆ ಕಂಡು ಕೊಂಡ ಮೇಲೆ ಎಂಬ ಆಲೋಚನೆ ಸರಿಯೆಂದು ಕೊಂಡರೂ…35 ರ ನಂತರ ಮದುವೆ ಎಂದು ಹೇಳುವುದಾದರೆ ಮಾತ್ರ ಕೆಲವು ಸಮಸ್ಯೆಗಳು ಎದುರಾಗುವ ಸಾದ್ಯತೆಗಳಿವೆ. ಆ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳೋಣ.

ಹಣಕ್ಕೆ ಪ್ರಾಮುಖ್ಯತೆ ನೀಡುವುದು :
30 ವರ್ಷ ವಯಸ್ಸಾದ ಪ್ರತಿಯೊಬ್ಬರಿಗೂ ಜೀವನದ ಬಗ್ಗೆ ಸಂಪೂರ್ಣವಾದ ತಿಳುವಳಿಕೆ ಬಂದಿರುತ್ತದೆ,ಹಣದ ಪ್ರಾಮುಖ್ಯತೆಯ ಬಗ್ಗೆ ಅರಿವಿರುತ್ತದೊಂದು ವೇಳೆ ಈ ಸಮಯದಲ್ಲಿ ಮದುವೆಯಾದರೆ…ಅಂತಹ ಯುವತಿ/ಯುವಕರ ಅಂತಿಮ ಗುರಿ ಸಾಧ್ಯವಾದಷ್ಟು ಹಣಗಳಿಸುವುದಾಗಿರುತ್ತದೆಯೇ ಹೊರತು ತಮ್ಮ ವೈವಾಹಿಕ ಜೀವನದಲ್ಲಿ ಶ್ರದ್ಧೆಯಿರುವುದಿಲ್ಲ.ಪರಸ್ಪರ ಇಷ್ಟಾಯಿಷ್ಟಗಳನ್ನು ತಿಳಿದುಕೊಳ್ಳಲು ಇಷ್ಟಪಡುವುದಿಲ್ಲ. ಇದರಿಂದಾಗಿ ವೈವಾಹಿಕ ಜೀವನ ಸರಿಯಾಗಿ ಸಾಗದು.

ಉತ್ಸಾಹ ಕುಂದುವುದು :
ಮದುವೆಯಾಗಲು 25-30 ಸರಿಯಾದ ವಯಸ್ಸು.30 ವರ್ಷ ಕಳೆದ ನಂತರ ಸ್ರೀ/ಪುರುಷರ ಸಾಂಗತ್ಯಕ್ಕಾಗಿ ಹಾತೊರೆಯುವ ಉತ್ಸುಕತೆ ಕಡಿಮೆಯಾಗುತ್ತದೆ.ಪರಸ್ಪರ ಆಕರ್ಷಣೆ ಕುಂದಿದರೆ ,ವೈವಾಹಿಕ ಜೀವನ ಸರಿಯಾಗಿ ಸಾಗಲಾರದು.

ಸಂಗಾತಿಗೆ ಹೆಚ್ಚಿನ ಸಮಯ ನೀಡಲಾಗದಿರುವುದು :
ಈ ವಯಸ್ಸಿಗೆ ಬರುವಷ್ಟರಲ್ಲೇ,ಸೇವಾ ಹಿರಿತನದಿಂದಾಗಿ ಉದ್ಯೋಗದಲ್ಲಿ ಭಡ್ತಿ ದೊರೆಯುವುದು,ಇದರೊಂದಿಗೆ ಹೆಚ್ಚುವರಿ ಬಾಧ್ಯತೆಗಳು ಬರುವುದರಿಂದ…ಜೀವನ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಲಾಗದ ಕಾರಣ ಅನೈತಿಕ ಸಂಬಂಧಕ್ಕೆ ಈಡಾಗುವ ಸಾಧ್ಯತೆಗಳಿವೆ.

ಸಾಮಾಜಿಕ ಒತ್ತಡಗಳು :
ಅದಾಗಲೇ ನಿಮ್ಮ ಮಿತ್ರರಿಗೆ ಶಾಲೆಗೆ ಹೋಗುವ ಮಕ್ಕಳಿರುವುದರಿಂದ ಅಪರಾಧ ಮನೋಭಾವಕ್ಕೆ ಈಡಾಗುವ ಅಂಶವಾಗುತ್ತದೆ. ಈ ವಿಷಯದಲ್ಲಿ ಬಂದು-ಮಿತ್ರರು, ಅಕ್ಕ ಪಕ್ಕದ ಮನೆಗಳವರು ಕೇಳುವ ಪ್ರಶ್ನೆಗಳಿಂದ ನಿಮಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.

ಲೈಂಗಿಕ ಶಕ್ತಿ ಕ್ಷೀಣಿಸುತ್ತದೆ :
25-30 ವರ್ಷ ವಯಸ್ಸಿನಲ್ಲಿ ಸ್ರೀ,ಪುರುಷರ ಲೈಂಗಿಕ ಸಾಮರ್ಥ್ಯ ಉತ್ತುಂಗದಲ್ಲಿರುತ್ತದೆ.ಪುರುಷರಲ್ಲಾದರೆ 30 ರ ನಂತರ ವೀರ್ಯಾಣುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಅಪೌಷ್ಟಿಕ ಆಹಾರ ಸೇವನೆ,ಕಲುಷಿತ ವಾತಾವರಣ,ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕ್ಷೀಣಿಸುತ್ತಿದೆ WHO ಪ್ರಕಾರ ಈ ಹಿಂದೆ 25-30 ವಯಸ್ಸಿನಲ್ಲಿ ಒಂದು ಮಿ.ಲೀ.ವೀರ್ಯದಲ್ಲಿ 130 ಮಿಲಿಯನ್ನುಗಳಿದ್ದ ವೀರ್ಯಾಣುಗಳ ಸಂಖ್ಯೆ ಈಗ 105 ಕ್ಕೆ ಇಳಿದಿದೆಯಂತೆ.

ಜೀವನದ ಮಾಧುರ್ಯ ಕಡಿಮೆಯಾಗುವುದು: 
30-35 ರ ವರೆಗೆ ಉದ್ಯೋಗಕ್ಕಾಗಿ ನಡೆಸುವ ಪ್ರಯತ್ನ…ಉದ್ಯೋಗ ದೊರೆತ ನಂತರ ಶಕ್ತಿಮೀರಿ ಕೆಲಸ ಮಾಡುವುದು,ನಂತರ ಮದುವೆ…ಮಕ್ಕಳಾಗುವುದು ನಂತರ ಅವರ ವಿದ್ಯಾಭ್ಯಾಸ, ಜೀವನ ರೂಪಿಸಿಕೊಳ್ಳುವುದರ ಕಡೆ ಗಮನ ಇವುಗಳ ಒಟ್ಟಾರೆ ವ್ಯವಸ್ಥೆಯಲ್ಲಿ ಜೀವನವನ್ನು ಅನುಭವಿಸುವುದರಿಂದ ವಂಚಿತರಾಗುವ ಸಂಭವಗಳಿವೆ. ಸಂಗಾತಿಯೊಡನೆ ಸಂತೋಷವಾಗಿ ಕಳೆಯಲಾಗದ ಪರಿಸ್ಥಿತಿ ಬರುತ್ತದೆ.

Comments are closed.