ಕರ್ನಾಟಕ

ತಾನೊಬ್ಬ ಲಾಭದಾಯಕ ಕೃಷಿಕ ಎಂದಿದ್ದ ಜಯಚಂದ್ರ

Pinterest LinkedIn Tumblr

jayachandraಬೆಂಗಳೂರು(ಡಿ.17): ಸಿಬಿಐ ಕಸ್ಟಡಿಯಲ್ಲಿರುವ ರಾಜ್ಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ ಎಸ್.ಸಿ.ಜಯಚಂದ್ರ ಗಳಿಸಿರೋ ಎಲ್ಲಾ ಬಗೆಯ ಆಸ್ತಿಪಾಸ್ತಿ ಯಾವ್ದೇ ಅಕ್ರಮ ಆಸ್ತಿಯಲ್ಲವಂತೆ. ಗಳಿಸಿರುವ ಆದಾಯವೆಲ್ಲವೂ ಕೃಷಿ, ತೋಟಗಾರಿಕೆಯಿಂದ ಬಂದ ಆದಾಯವಂತೆ. ಹೀಗಂತ ಖುದ್ದು ಜಯಚಂದ್ರ ಲೋಕಾಯುಕ್ತದ ಮುಂದೆ ವಾದ ಮಾಡಿದ್ರು. ಆದ್ರೆ ಆ ವಾದದಲ್ಲಿ ಹುರುಳೇ ಇಲ್ಲ.. ಇದೆಲ್ ಸುಳ್ಳೇ ಸುಳ್ಳು ಎನ್ನುವುದನ್ನು ಲೋಕಾಯುಕ್ತ ಪೊಲೀಸರೇ ಸಾಬೀತು ಪಡಿಸಿದ್ದಾರೆ.
ಕೃಷಿಯಿಂದ ಬಂದ ಲಾಭದ ಹಣವೆಂದ ಕಳಂಕಿತ ಅಧಿಕಾರಿ
ಎಸ್. ಜಯಚಂದ್ರ.. ಜಾರಿ ನಿರ್ದೇಶನಾಲಯದ ದಾಳಿ ಬಳಿಕ ರಾಜ್ಯಾದ್ಯಂತ ಮಾತಾಗಿರುವ ಅಧಿಕಾರಿ. 1993ರಲ್ಲಿ ಕೇವಲ 2,225 ರೂಪಾಯಿ ತಿಂಗಳ ವೇತನ ಪಡೀತಿದ್ದ ಜಯಚಂದ್ರ 2008ರ ಹೊತ್ತಿಗೆ ಕೋಟ್ಯಾಧಿಪತಿ. ಜಮೀನು, ಸೈಟು ಖರೀದಿ. ಮನೆಯಲ್ಲೆ ಲಕ್ಷಾಂತರ ರೂಪಾಯಿ ಕ್ಯಾಶ್ ಇಟ್ಕೊಳ್ಳೋ ಮಟ್ಟಿಗೆ ಐಶ್ವರ್ಯವಂತ. ಈ ಮಧ್ಯೆ ಅಕ್ರಮ ವಾಸನೆಯ ಸುಳಿವು ಸಿಗುತ್ತಲೇ ಲೋಕಾಯುಕ್ತ ಪೊಲೀಸರು 2008ರಲ್ಲಿ ರೈಡ್ ಮಾಡಿದ್ದರು. ಆಗ ಸಿಕ್ಕಿದ್ದು ಬರೋಬ್ಬರಿ 72 ಲಕ್ಷ ರೂಪಾಯಿ. ಆದರೆ ಅದು ಅಕ್ರಮ ಗಳಿಕೆಯಲ್ಲ. ಕೃಷಿಯಿಂದ ಬಂದ ಲಾಭ ಎಂದು ಹೊಸ ಲೆಕ್ಕ ಕೊಟ್ಟಿದ್ದು ಇದೇ ಜಯಚಂದ್ರ..
ತಾನೊಬ್ಬ ಲಾಭದಾಯಕ ಕೃಷಿಕ ಎಂದಿದ್ದ ಜಯಚಂದ್ರ
ಅವತ್ತು 72 ಲಕ್ಷ ರೂಪಾಯಿ ಸಿಕ್ಕಾಗ, ಇದು ಅಕ್ರಮ ಗಳಿಕೆಯಲ್ಲ. ನಾನೊಬ್ಬ ಲಾಭದಾಯಕ ಕೃಷಿಕ ಎಂದು ಲೋಕಾ ಪೊಲೀಸರೆದರು ಜಯಚಂದ್ರ ಹೇಳಿಕೆ ನೀಡದ್ದರು. ಆದರೆ ಇದನ್ನು ಲೋಕಾಯುಕ್ತ ಪೊಲೀಸರು ಒಪ್ಪಿಕೊಳ್ಳಲಿಲ್ಲ. ತೋಟಗಾರಿಕೆ ಇಲಾಖೆ ಅಡಿಷನಲ್ ಡೈರೆಕ್ಟರ್ ಹಿತ್ತಲಮನಿ ನೇತೃತ್ವದಲ್ಲಿ ಒಂದ್ ಮೌಲ್ಯಮಾಪನ ನಡೆಯುತ್ತದೆ. ಹಿತ್ತಲಮನಿ ನೇರವಾಗಿ ನೆಲಮಂಗಲ ಬಳಿಯ ಯಂಟಗಾನಹಳ್ಳಿಯಲ್ಲಿರುವ 16 ಎಕರೆ ಜಮೀನಿನಲ್ಲಿ ಬಂದು ಒಂದ್ ರೌಂಡ್ ಹಾಕಿ ವರದಿ ಕೊಟ್ಟರು.

ಜಯಚಂದ್ರ ಹೇಳಿದ್ದೆಲ್ಲ ಸುಳ್ಳೇ ಸುಳ್ಳು!
ಇಲ್ಲಿಗೆ ಜಯಚಂದ್ರ ಹೇಳಿದ್ದೆಲ್ಲ ಸುಳ್ಳೇ ಸುಳ್ಳು ಎನ್ನುವುದು ಸಾಬೀತಾಗುತ್ತದೆ. ಹಿತ್ತಲಮನಿ ಅವರು ಕೊಟ್ಟ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ಸರ್ಕಾರಕ್ಕೆ ಅಂತಿಮ ತನಿಖಾ ವರದಿ ಕಳಿಸಿದರು. ದೋಷಾರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ಕೊಡಿ ಎಂದು ನಾಲ್ಕೈದು ಬಾರಿ ಪತ್ರ ಬರೆದರೂ ಸರ್ಕಾರದಿಂದ ಇದುವರೆಗೂ ಅನುಮತಿ ಸಿಕ್ಕಿಲ್ಲ. ಇದೀಗ ಇದೇ ವರದಿಯನ್ನು ಎಸಿಬಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Comments are closed.