ಕರ್ನಾಟಕ

ಕುಮಾರಸ್ವಾಮಿ ಹುಟ್ಟುಹಬ್ಬ ವೇಳೆ ಬೃಹತ್ ಕೇಕ್ ಮಣ್ಣುಪಾಲು

Pinterest LinkedIn Tumblr

kumarswamyತುಮಕೂರು: ಶುಕ್ರವಾರದಂದು 58ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಇವತ್ತು ತುಮಕೂರಿನ ಸಿದ್ದಾಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ್ರು. ಮಠದಲ್ಲಿ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಿಸಿಕೊಂಡ್ರು.

ಈ ವೇಳೆ ಕೇಕ್ ಪಡೆಯಲು ಮಠದ ವಿದ್ಯಾರ್ಥಿಗಳು ಮುಗಿಬಿದ್ದ ಕಾರಣ ನೂಕುನುಗ್ಗಲು ಉಂಟಾಗಿ ಬೃಹತ್ ಗಾತ್ರದ ಕೇಕ್ ಮಠದ ಆವರಣದ ನೆಲಕ್ಕೆ ಬಿದ್ದು ಮಣ್ಣುಪಾಲಾಯ್ತು. ಹೆಚ್‍ಡಿಕೆಗೆ ಶ್ರೀ ಶಿವಕುಮಾರಸ್ವಾಮೀಜಿ ಹುಟ್ಟುಹಬ್ಬದ ಶುಭಾಶಯ ಕೋರಿ ಆಶಿರ್ವದಿಸಿದ್ರು. ಈ ವೇಳೆ ನೂರಾರು ಕಾರ್ಯಕರ್ತರು ಕೂಡ ಸ್ಥಳದಲ್ಲಿ ಜಮಾವಣೆಗೊಂಡಿದ್ದರು.

ಇದೇ ವೇಳೆ ಭಿನ್ನಮತೀಯರ ಟೀಂನಿಂದ ಶಾಸಕ ಗೋಪಾಲಯ್ಯ ಹೊರಬಂದು ಮತ್ತೆ ಜೆಡಿಎಸ್ ತೆಕ್ಕೆಗೆ ಸೇರಿಕೊಂಡಿರುವ ಬಗ್ಗೆ ಮಾತನಾಡಿದ ಹೆಚ್‍ಡಿಕೆ, ಭಿನ್ನಮತಿಯರ ಸಂಧಾನ ಮುಗಿದ ಅಧ್ಯಾಯ. ಆದರೆ ಗೋಪಾಲಯ್ಯ ಅದಕ್ಕೆ ಭಿನ್ನವಾದವರು. ಗೋಪಾಲಯ್ಯ ನಿನ್ನೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರಷ್ಟೇ, ರಾಜಿಸಂಧಾನ ನಡೆದಿಲ್ಲ. ವಾಪಸ್ ಕರೆಸಿಕೊಳ್ಳುವ ವಿಚಾರ ಶಿಸ್ತು ಕಮಿಟಿ ಮುಂದಿದೆ. ಕಮಿಟಿ ಪರಿಶೀಲಿಸಿ ಆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿದೆ ಅಂದ್ರು.

ಫೆಬ್ರವರಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. 2018 ಕ್ಕೆ ಪಕ್ಷ ಅಧಿಕಾರಕ್ಕೆ ತರುವುದೊಂದೆ ನನ್ನ ಗುರಿ. ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತೇವೆ ಅಂತ ಎಚ್‍ಡಿಕೆ ಹೇಳಿದ್ರು.

ಹೆಚ್‍ಟಿಕೆ ಸಹೋದರ ಹೆಚ್‍ಡಿ ರೇವಣ್ಣ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ .60 ನೇ ವಸಂತಕ್ಕೆ ಕಾಲಿಟ್ಟಿರುವ ರೇವಣ್ಣ ಮುಂಜಾನೆಯೇ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ರು. ರೇವಣ್ಣ ಅವರ ಕ್ಷೇತ್ರ ಹೊಳೆನರಸಿಪುರದಲ್ಲಿ ಅವರ ಅಭಿಮಾನಿಗಳು ರೇವಣ್ಣ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Comments are closed.