ಮನೋರಂಜನೆ

ರಾಮ್ ಗೋಪಾಲ್ ವರ್ಮಾ ಹೊಸ ಚಿತ್ರದ ಹೆಸರು ’ಶಶಿಕಲಾ’

Pinterest LinkedIn Tumblr

Ramgopal-Vermaವಿವಾದಾತ್ಮಕ ವ್ಯಕ್ತಿಗಳು, ರೋಚಕ ಸಂಗತಿಗಳು, ಭೂಗತ ಜಗತ್ತು, ದೆವ್ವ ಭೂತದಂತಹ ಅಲೌಕಿಕ ಜಗತ್ತಿನ ಕಥೆಗಳನ್ನು ಹೆಣೆಯುವುದರಲ್ಲಿ ರಾಮ್ ಗೋಪಾಲ್ ವರ್ಮಾಗೆ ಯಾರು ತಾನೆ ಸಾಟಿ. ಇದೀಗ ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಮೇಲೆ ವರ್ಮಾ ಕಣ್ಣುಬಿದ್ದಿದೆ.

ಇದೊಂದು ರಾಜಕಾರಣಿಯ ಆತ್ಮೀಯ ಗೆಳತಿಯ ಕಥೆ ಎಂದೂ ವರ್ಮಾ ತಿಳಿಸಿದ್ದಾರೆ. ಈಗತಾನೆ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ. ಆದರೆ ಕಥೆ ಕಾಲ್ಪನಿಕ ಎಂದು ಹೇಳಿ ಮುಂದೆ ಆಗಬಹುದಾದ ಎಡವಟ್ಟುಗಳಿಗೆ ಈಗಲೇ ಸಿದ್ದವಾದಂತಿದೆ ವರ್ಮಾ.

ಶಶಿಕಲಾ ಅವರ ಕಾಲ್ಪನಿಕ ಕಥೆಗೂ ಜಯಲಲಿತಾ ಅವರೊಂದಿಗಿನ ಸಂಬಂಧಕ್ಕೂ ಬಹಳಷ್ಟು ವಿರೋಧಾಭಾಸಗಳಿವೆ. ಜಯಲಲಿತಾ ಅವರಿಗಿಂತ ನನಗೆ ಶಶಿಕಲಾ ಇಷ್ಟವಾಗುತ್ತಾರೆ. ಅವರನ್ನು ನಾನು ಸ್ವಲ್ಪ ಜಾಸ್ತಿನೇ ಗೌರವಿಸುತ್ತೇನೆ. ಜಯಲಲಿತಾ ಅವರು ಶಶಿಕಲಾ ಅವರನ್ನು ಹೆಚ್ಚು ಗೌರವಿಸಿದ್ದರು. ಹಾಗಾಗಿ ನನ್ನ ಕಥೆಯ ಕೇಂದ್ರ ಬಿಂದು ಶಶಿಕಲಾ ಎಂದಿದ್ದಾರೆ ವರ್ಮಾ. ಒಟ್ನಲ್ಲಿ ಇನ್ನೇನು ವಿವಾದಗಳು ಎದುರಾಗುತ್ತವೋ ಏನೋ.

ಸದ್ಯಕ್ಕೆ ವರ್ಮಾ ಅವರು ಸರ್ಕಾರ್ ಚಿತ್ರದ ಮುಂದಿನ ಸರಣಿ ಚಿತ್ರೀಕರಣದಲ್ಲಿದ್ದಾರೆ. ಈ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್, ಯಾಮಿ ಗೌತಮ್, ಮನೋಜ್ ಭಾಜಪೇಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಶಶಿಕಲಾ ಸೆಟ್ಟೇರಲಿದೆ.

Comments are closed.