ಕರ್ನಾಟಕ

ನೋಟು ನಿಷೇಧ ಮೋದಿ ಸೃಷ್ಟಿಸಿದ ದುರಂತ: ಬೆಳಗಾವಿಯಲ್ಲಿ ರಾಹುಲ್ ಗಾಂಧಿ

Pinterest LinkedIn Tumblr

rahulಬೆಳಗಾವಿ (ಡಿ. 17): ನೋಟು ಅಮಾನ್ಯ ಕ್ರಮದ ವಿರುದ್ಧ ಟೀಕೆಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅದನ್ನು ‘ಮೋದಿ ಸೃಷ್ಟಿಸಿದ ದುರಂತ’ವೆಂದು ಬಣ್ಣಿಸಿದ್ದಾರೆ.
ಬೆಳಗಾವಿಯ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ, ನೋಟು ಅಮಾನ್ಯ ಮಾಡುವ ಮೂಲಕ ಪ್ರಧಾನಿ ಮೋದಿ ದೇಶದ ಆರ್ಥಿಕತೆಗೆ ಹೊಡೆತ ನೀಡಿದ್ದಾರೆ ಎಂದು ಹೇಳಿದ್ದಾರೆ.
ನೋಟು ನಿಷೇಧದಿಂದಾಗಿ ನೂರಕ್ಕಿಂತಲೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಪ್ರಧಾನಿ ಅವುಗಳ ಹೊಣೆ ಹೊರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ ಎರಡುವರೆ ವರ್ಷಗಳಿಂದ ಮೋದಿ ಸರ್ಕಾರವು ಬಡಜನರ ಮೇಲೆ ಪ್ರಹಾರ ನಡೆಸುತ್ತಾ ಬಂದಿದೆ ಎಂದು ಹೇಳಿದ ರಾಹುಲ್ ಗಾಂಧಿ, 50 ದಿನಗಳಲ್ಲಿ ಪರಿಸ್ಥಿತಿ ಉತ್ತಮವಾಗಲು ಸಾಧ್ಯವಿಲ್ಲವೆಂದಿದ್ದಾ
ಪ್ರಧಾನಿಯವರ ವೈಯುಕ್ತಿಕ ಹಗರಣದ ಬಗ್ಗೆ ತನ್ನ ಬಳಿ ಮಾಹಿತಿಯಿದ್ದು, ಅದನ್ನು ಲೋಕಸಭೆಯಲ್ಲೇ ಬಹಿರಂಗಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

Comments are closed.