ಕರ್ನಾಟಕ

ಸಿಲಿಂಡರ್ ಬಿಲ್ ಪಾವತಿಗೆ ಪ್ರತ್ಯೇಕ ಕಾರ್ಡ್

Pinterest LinkedIn Tumblr

lpg-cylinderಬೆಂಗಳೂರು: ಇನ್ನು ಮುಂದೆ ಗ್ಯಾಸ್ ಸಿಲಿಂಡರ್ನ ಹಣ ಪಾವತಿಸಲು ನಗದಿನೊಂದಿಗೆ ವಿತರಕರಿಗಾಗಿ ಕಾಯುವ ಅಗತ್ಯವಿಲ್ಲ.

ಕೇಂದ್ರ ಸರಕಾರ 500, 1000 ರು. ನೋಟನ್ನು ನಿಷೇಧಿಸಿದ ಹಿನ್ನೆಲೆ ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ ನೀಡಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿಎಲ್) ತನ್ನ ಎಲ್ಪಿಜಿ ಗ್ರಾಹಕರಿಗೆ ಪ್ರತ್ಯೇಕ ಆ್ಯಪ್/ಕಾರ್ಡ್ ರೂಪಿಸಲು ಸಿದ್ಧತೆ ನಡೆಸಿದೆ.

ಐ.ಒ.ಸಿ.ಎಲ್ ನಗದು ರಹಿತ ವಹಿವಾಟು ಪ್ರೋತ್ಸಾಹಿಸಲು ಖಾಸಗಿ ಕಂಪನಿ ‘ಪೇಟಿಎಂ’ ಜತೆಗೆ ಸಹಭಾಗಿತ್ವ ಹೊಂದಿದೆ. ಅಲ್ಲದೇ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಗೆ ಸ್ವೈಪಿಂಗ್ ಯಂತ್ರ ನೀಡುತ್ತಿದೆ. ಐಒಸಿಎಲ್ ಪೆಟ್ರೋಲ್ ಗ್ರಾಹಕರಿಗೆ ಪ್ರತ್ಯೇಕ್ ಕಾರ್ಡ್ ಮಾಡಿದ್ದು, ಅದೇ ಮಾದರಿಯಲ್ಲಿ ಸಿಲಿಂಡರ್ ಹಣ ಪಾವತಿಸಲು ಪ್ರತ್ಯೇಕ ಕಾರ್ಡ್ ರೂಪಿಸಲು ಚಿಂತನೆ ನಡೆಸಿದೆ.

ಇದರಿಂದಾಗಿ, ಗ್ರಾಹಕರು ಗ್ಯಾಸ್ ವಿತರಕರಿಗೆ ನೀಡುವ ಕಮಿಷನ್ಗೂ ಕಡಿವಾಣ ಬೀಳುವ ಸಾಧ್ಯತೆ ಇದೆ.

Comments are closed.