ರಾಷ್ಟ್ರೀಯ

ಅಮಾನ್ಯಗೊಂಡ ನೋಟುಗಳ ಸಿಂಧುತ್ವವನ್ನು ಅಧಿಕೃತ ಅಂತ್ಯಕ್ಕೆ ತಯಾರಿ!

Pinterest LinkedIn Tumblr

noteಚೆನ್ನೈ: ನ.9ಕ್ಕೂ ಮುನ್ನ ಮುದ್ರಿತವಾದ 500,1000 ರುಪಾಯಿಗಳ ನೋಟುಗಳ ಸಿಂಧುತ್ವವನ್ನು ಅಧಿಕೃತವಾಗಿ ಅಂತ್ಯಗೊಳಿಸಲು ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗುವ ಮುನ್ಸೂಚನೆಯಿದೆ. ಇದಕ್ಕೆ ಅಗತ್ಯವಿರುವ ಗೊತ್ತುವಳಿಯನ್ನು 2017-18ರ ಬಜೆಟ್ ಘೋಷಣೆ ವೇಳೆ ಘೋಷಿಸುವ ಸಾಧ್ಯತೆ ಇದೆ.
ನೋಟು ನಿಷೇಧದ ಮುಂದುವರಿದ ಭಾಗವಾದ ಈ ತಿದ್ದುಪಡಿಯಿಂದಾಗಿ 500,1000 ರು ನೋಟುಗಳು ಪ್ರಸಕ್ತ ವಿತ್ತೀಯ ವರ್ಷದ ಕೊನೆ ದಿನವಾದ ಮಾ.31ರಂದು ತಮ್ಮ ಸಿಂಧುತ್ವ ಕಳೆದುಕೊಳ್ಳಲಿವೆ.

1978 ರಲ್ಲಿ ನೋಟುಗಳನ್ನು ನಿಷೇಧ ಮಾಡಿದ್ದ ಮುಂದಿನ ದಿನಗಳಲ್ಲಿ ಆರ್‌ಬಿಐ ಕಾಯ್ದೆ 26(2)ನ್ನು ಮಾಡಲಾಗಿತ್ತು. ಇದೇ ಕಾಯ್ದೆಯನ್ವಯ ನ.8ರ ಘೋಷಣೆಯನ್ನು ಮಾಡಲಾಗಿತ್ತು.

ಆರ್‌.ಬಿ.ಐ ಕಾಯ್ದೆ 26(2)ರ ಪ್ರಕಾರ, ರಿಸರ್ವ್ ಬ್ಯಾಂಕ್ ಸೂಚನೆಯನ್ವಯ ಕೇಂದ್ರ ಸರಕಾರ ನೋಟು ನಿಷೇಧದ ಸುಗ್ರೀವಾಜ್ಞೆಯನ್ನು ಹೊರಡಿಸಬಹುದಾಗಿದೆ ಹಾಗೂ ಅಧಿಕೃತವಾಗಿ ಘೋಷಣೆಯಾದ ದಿನದಿಂದ ಸಂಬಂಧಪಟ್ಟ ನೋಟುಗಳ ಸಿಂಧುತ್ವ ರದ್ದಾಗಲಿದೆ.

ನೋಟು ನಿಷೇಧದ ಪರಿಣಾಮ ವ್ಯವಸ್ಥೆಯಿಂದ ಹೊರಗುಳಿದ ನಗದಿನ ಪ್ರಮಾಣದ ಕುರಿತು ವಿಚಾರಿಸಿದಾಗ ”ಮರಳಿ ವ್ಯವಸ್ಥೆಗೆ ಬರದ ಹಣಕ್ಕೆ ಪುನರ್ಜೀವ ನೀಡಿ ಸರಕಾರೀ ವ್ಯಯಗಳಿಗೆ ವಿಶೇಷ ಅಥವಾ ಹೆಚ್ಚಿನ ಲಾಭಾಂಶದ ರೂಪವಾಗಿ ಆರ್‌ಬಿಐ ನೀಡಲಿದೆ” ಎಂದು ಮೂಲಗಳು ತಿಳಿಸಿವೆ. ಯಾವುದೇ ದೇಶದ ಆರ್‌.ಬಿ.ಐ ತತ್ಸಮಾನ ಕೇಂದ್ರೀಯ ಬ್ಯಾಂಕ್ ಬಳಿ ಮುದ್ರಣ ಹಾಗೂ ನಗದು ಸಂಗ್ರದ ವಾರ್ಷಿಕ ಮಿತಿಯನ್ನು ಮೀರಿದ ಮೊತ್ತವಿದ್ದರೆ ಹೆಚ್ಚಿನ ಲಾಭಾಂಶ ಅಥವಾ ವಿಶೇಷ ಲಾಭಾಂಶದ ಲೆಕ್ಕಾಚಾರಗಳು ಬರುತ್ತವೆ.

ನಿಷೇಧಗೊಳಿಸಲಾದ 15.5 ಲಕ್ಷ ಕೋಟಿ ರು. ಮೊತ್ತದ ನಗದಿನಲ್ಲಿ ಈಗಾಗಲೇ, 12 ಲಕ್ಷ ಕೋಟಿ ರುಪಾಯಿಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ. 13 ಲಕ್ಷ ಕೋಟಿ ರುಪಾಯಿಗಳಷ್ಟು ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಲಿದೆ ಎಂಬುದು ಕೇಂದ್ರ ಸರಕಾರದ ನಿರೀಕ್ಷೆಯಾಗಿದೆ.

ಕಾಯ್ದೆಗೆ ತಿದ್ದುಪಡೆ ತರದಿದ್ದಲ್ಲಿ ಚೇತರಿಕೆಯಾಗದೆ ಉಳಿಯಬಹುದಾದ 2-2.5 ಲಕ್ಷ ಕೋಟಿ ರುಪಾಯಿಗಳನ್ನು ಹೆಚ್ಚಿನ ಲಾಭಾಂಶ ಎಂದು ಪರಿಗಣಿಸಿ ಸರಕಾರದ ವ್ಯಯಗಳಿಗೆ ಬಳಸಲು ಆಗುವುದಿಲ್ಲ.

Comments are closed.