ಪ್ರಮುಖ ವರದಿಗಳು

ನಾನು ಸತ್ತಿದ್ದೇನೆ ಎಂದು ಎಲ್ಲರಿಗೂ ಶಾಕ್‌ ಆಗುವಂತೆ ಮಾಡಿದೆ!: ಪೂನಂ ಪಾಂಡೆ ವಿಡಿಯೋ ವೈರಲ್

Pinterest LinkedIn Tumblr

ಮುಂಬೈ: ಬಾಲಿವುಡ್ ನ ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ಜೀವಂತವಾಗಿರುವುದಾಗಿ ತಾನೇ ಸ್ವತಃ ಇನ್ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರ್ ನಿಂದ 32ನೇ ವರ್ಷದಲ್ಲಿ ಮೃತಪಟ್ಟಿದ್ದಾರೆಂದು ನಿನ್ನೆ (ಶುಕ್ರವಾರ) ಬಾರೀ ಸುದ್ದಿಯಾಗಿತ್ತು. ಆಕೆಯ ಮ್ಯಾನೇಜರ್ ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ, ಅವರ ಕುಟುಂಬ ಮೂಲ ತಿಳಿಸಿದೆ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಇಂದು ಸ್ವತಃ ಪೂನಂ ಪಾಂಡೆಯೇ ಸ್ಪಷ್ಟನೆ ನೀಡಿ ಆಘಾತ ಮೂಡಿಸಿದ್ದಾರೆ. ‘ನಾನು ಈ ರೀತಿ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಯಾರಿಗಾದರೂ ಇದರಿಂದ ನೋವು ಆಗಿದ್ದರೆ ಕ್ಷಮೆ ಇರಲಿ. ಹೌದು ನಾನು ಸತ್ತಿದ್ದೇನೆ ಎಂದು ಎಲ್ಲರಿಗೂ ಶಾಕ್‌ ಆಗುವಂತೆ ಮಾಡಿದೆ. ನನ್ನ ಸಾವು ಆಗಿದೆ ಎಂದು ಸುಳ್ಳು ಹೇಳಿದೆ. ಸಾವಿನ ಬಗ್ಗೆ ಸುದ್ದಿ ಹಬ್ಬಿಸಿದ್ದಕ್ಕೆ ಹೆಮ್ಮೆಯಿದೆ. ಗರ್ಭಕಂಠದ ಕ್ಯಾನ್ಸರ್‌ ನಿಧನವಾಗಿ ಕೊಲ್ಲುವ ಕಾಯಿಲೆ. ಇದರ ಬಗ್ಗೆ ನಾವು ಹೆಚ್ಚಾಗಿ ಮಾತನಾಡುತ್ತಿಲ್ಲ. ಇದರ ಜಾಗೃತಿಗಾಗಿ ನಾನು ಹೀಗೆ ಮಾಡಿದೆ. ಇದರ ಬಗ್ಗೆ ನಾವು ಹೆಚ್ಚಾಗಿ ಮಾತನಾಡಬೇಕು. ನಿಮ್ಮ ಬಳಿ ಏನಾದರೂ ಪ್ರಶ್ನೆಗಳಿಂದ ನಾನು ಲೈವ್‌ ಬಂದು ಉತ್ತರಿಸುತ್ತೇನೆ’ ಎಂದು ಹೇಳಿದ್ದಾರೆ.

Comments are closed.