ರಾಷ್ಟ್ರೀಯ

ಪಾಕ್ ಸೇನೆ ನಮ್ಮನ್ನು ಅತ್ಯಾಚಾರವೆಸಗುವ ಪರವಾನಗಿ ಹೊಂದಿದೆ: ನಯೀಲಾ ಬಲೂಚ್

Pinterest LinkedIn Tumblr

naela-quadriನವದೆಹಲಿ: ಬಲೂಚಿಸ್ತಾನದ ಜನರನ್ನು ಹತ್ಯೆ ಮಾಡುವ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಎಲ್ಲಾ ಪರವಾನಗಿಯನ್ನು ಪಾಕಿಸ್ತಾನ ಹೊಂದಿದ್ದು, ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ವಿಶ್ವಸಂಸ್ಥೆ ಮಾತ್ರ ಮೌನವನ್ನು ವಹಿಸಿದೆ ಎಂದು ಬಲೂಚಿಸ್ತಾನ ಹೋರಾಟಗಾರ್ತಿ ನಯೀಲಾ ಖಾರ್ದಿ ಬಲೂಚ್ ಅವರು ಹೇಳಿದ್ದಾರೆ.
ಪಾಕಿಸ್ತಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ನಮ್ಮನ್ನು ಹತ್ಯೆ ಮಾಡುವ ಪರವಾನಗಿಯನ್ನು ಹೊಂದಿದೆ, ಅತ್ಯಾಚಾರ ನಡೆಸುವ ಪರವಾನಗಿಯನ್ನು ಹೊಂದಿದೆ, ದೌರ್ಜನ್ಯ ಎಸಗುವ ಪರವಾನಗಿಯನ್ನು ಹೊಂದಿದೆ ಹಾಗೂ ಜನರ ಅಂಗಾಂಗಗಳನ್ನು ತೆಗೆದುಕೊಂಡು ಹೋಗಿ ಅವುಗಳ ಮಾರಾಟವನ್ನು ಮಾಡುತ್ತಿದೆ. ಪಾಕಿಸ್ತಾನ ಸೇನೆ ಈದಿ ಫೌಂಡೇಷನ್ ಜೊತೆಗೆ ಕೈಜೋಡಿಸಿದ್ದು, ಬಲೂಚಿಸ್ತಾನ ಜನತೆಯನ್ನು ಅಪಹರಿಸಿ ಅವರ ದೇಹದ ಅಂಗಾಂಗಳನ್ನು ಮಾರಾಟ ಮಾಡುತ್ತಿದೆ. ಮಹಿಳೆಯನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆ. ಬಲೂಚಿಸ್ತಾನ ಜನತೆಯ ಮೇಲೆ ಪಾಕಿಸ್ತಾನ ಸೇನೆ ಊಹಿಸಿಕೊಳ್ಳಲು ಅಸಾಧ್ಯವಾದಷ್ಟು ದೌರ್ಜನ್ಯವನ್ನು ಎಸಗುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಚೀನಾ ರಾಷ್ಟ್ರದೊಂದಿಗೆ ಕೈಜೋಡಿಸಿ ಬಲೂಚಿಸ್ತಾನದಲ್ಲಿ ನರಮೇಧವನ್ನು ನಡೆಸುತ್ತಿದೆ. ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ದಿನವನ್ನು ಘೋಷಣೆ ಮಾಡಲಾಗಿದೆ. ಆದರೆ, ಬಲೂಚಿಸ್ತಾನ ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನವನ್ನು ಮುಂದುವರೆಸುತ್ತಿದೆ. ಪ್ರಾಣಿಗಳಿಗಿರುವ ಹಕ್ಕಿಗಿಂತಲೂ ಬಲೂಚಿಸ್ತಾನ ಜನತೆಯ ಹಕ್ಕು ಹೀನಾಯವಾಗಿದೆ.
100ಕ್ಕೂ ಹೆಚ್ಚು ಸಾಮೂಹಿಕ ಸಾಮಾಧಿಗಳನ್ನು ಮಾಡಲಾಗಿದ್ದು, ಒಂದೊಂದು ಸಾಮಾಧಿಯಲ್ಲಿ 100 ಜನರನ್ನು ಇರಿಸಲಾಗಿದೆ. ಸಮಾಧಿ ಮಾಡುವಾಗ ಬಹುತೇಕ ಮಂದಿ ಬದುಕಿದ್ದರೂ, ಆದರೂ, ಅವರನ್ನು ಸಮಾಧಿ ಮಾಡಲಾಗಿದ್ದು ಎಂದು ವೈದ್ಯರು ಹೇಳಿದ್ದರು.
ಇಂದೂ ಬಲೂಚಿಸ್ತಾನದ ಪರಿಸ್ಥಿತಿಯನ್ನು ಹೃದಯವಿರುವ ಮನುಷ್ಯರು ಯಾರೇ ನೋಡಿದರೂ ಸುಮ್ಮನೆ ಇರುವುದಿಲ್ಲ. ಆದರೆ, ವಿಶ್ವಸಂಸ್ಥೆಯ ಮೌನವನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ ಎಂದು ನಯೀಲಾ ಅವರು ಹೇಳಿದ್ದಾರೆ.

Comments are closed.