ಕರ್ನಾಟಕ

ಹೈಕಮಾಂಡ್ ನನ್ನ ರಾಜೀನಾಮೆ ಕೇಳಿಲ್ಲ-ತನ್ವೀರ್‌ಸೇಠ್

Pinterest LinkedIn Tumblr

tanveer-saitರಾಯಚೂರು ನ.೧೧- ನನ್ನ ಮೊಬೈಲ್‌ಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದವರ ಮೇಲೆ ಮತ್ತು ಮಾಧ್ಯಮಗಳ ಮೇಲೆ ಕಾನೂನು ಹೋರಾಟ ನಡೆಸುತ್ತೇನೆ ಹಾಗೂ ಸೈಬರ್ ಕ್ರೈಂಗೆ ದೂರು ನೀಡುತೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್‌ಸೇಠ್ ತಿಳಿಸಿದ್ದಾರೆ.
ಅವರು ಯರಮರಸ್‌ನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಯಾರೋ ನನ್ನ ಮೇಲೆ ಪಿತೂರಿ ನಡೆಸಿ ನನ್ನ ಮೇಲೆ ಕೆಟ್ಟ ಭಾವನೆ ಮೂಡುವಂತೆ ಮಾಡಿದ್ದಾರೆ. ಮೊದಲಿಗೆ ಇಂತಹ ಅರೆ ನಗ್ನ ಚಿತ್ರಗಳನ್ನು ಕಳುಹಿಸಿದವರ ಮೇಲೆ ಸೈಬರ್ ಕ್ರೈಂ ಗೆ ದೂರು ನೀಡುತೇನೆ. ಅವರು ತನಿಖೆ ಮಾಡಲಿ. ನಂತರ ನಿಜವಾದ ಸಂಗತಿ ಬೆಳಕಿಗೆ ಬರಲಿದೆ ಎಂದು ಹೇಳಿದರು. ಕೆಲ ಮಾಧ್ಯಮಗಳು ಕೂಡ ಅಪಪ್ರಚಾರ ನಡೆಸಿದ್ದು, ಮಾನನಷ್ಟ ಮೊಕದ್ದಮೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅದರೆ ಈ ಪ್ರಕರಣಕ್ಕೆ ಸಂಬಂಧಿದಂತೆ ಹೈಕಮಾಂಡ್ ನನ್ನನ್ನು ರಾಜೀನಾಮೆ ಕೇಳಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಮಾತನಾಡಿದ್ದೇನೆ,
ಈ ಈ ಹಿಂದೆ ಬಿಜೆಪಿ ಮೂವರು ಶಾಸಕರು ವಿಧಾನಸಭೆಯಲ್ಲಿ ಅಶ್ಲೀಲಚಿತ್ರ ವಿಕ್ಷೀಸಿದ್ದರು. ಇಂತಹ ಅವಕಾಶ ಬಳಸಿಕೊಂಡು ನನ್ನ ಮೇಲೆ ಅಂತಹ ಆರೋಪ ಮಾಡುತ್ತಿದ್ದಾರೆ ಹಾಗೂ ಮಾಡಿದ್ದ ತಪ್ಪನ್ನು ನನ್ನ ಮೇಲೂ ಹೊರಿಸಲು ಪ್ರಯತ್ನ ನಡೆಯುತ್ತಿದೆ. ನನ್ನೀಂದ ಅಂತಹ ತಪ್ಪು ನಡೆದಿಲ್ಲ ಎಂದ ಅವರು ವೇದಿಕೆಯಲ್ಲಿ ಮೈಸೂರಿನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ನನ್ನ ಮೊಬೈಲ್ ಕಳುಹಿಸಲಾಗಿತ್ತು ಅದನ್ನು ನೋಡುತ್ತಿದ್ದೆ ವಿನಃ ಅಶ್ಲೀಲ ಚಿತ್ತ ನೋಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

Comments are closed.