ಮುಂಬೈ: ₹100 ನೋಟುಗಳನ್ನೇ ಲಂಚ ಕೊಡುವಂತೆ ಕೇಳಿದ ಆರೋಪದಲ್ಲಿ ಸರ್ಕಾರಿ ನೌಕರರೊಬ್ಬರನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ.
ಸೋಲಾಪುರದ ಕೃಷಿ ಅಧಿಕಾರಿ ಬಾಲಸಾಹೇಬ್ ಭಿಕಾಜಿ ಬಾಬರ್ ಎಂಬವರು ಅರ್ಜಿಯೊಂದನ್ನು ಸ್ವೀಕರಿಸುವುದಕ್ಕಾಗಿ ದತ್ತಾತ್ರೇಯ ಬೆಡ್ಗೆ ಎಂಬವರಿಂದ ರು. 2500 ಲಂಚ ಕೇಳಿದ್ದಾರೆ.
ಮಂಗಳವಾರ ರಾತ್ರಿ ₹. 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವಂತೆ ಸರ್ಕಾರ ಆದೇಶ ಹೊರಡಿಸುವುದರಿಂದ ತನಗೆ ಹಣ ನೀಡುವಾಗ 100 ರುಪಾಯಿಯ 25 ನೋಟುಗಳನ್ನೇ ನೀಡಬೇಕೆಂದು ಬಾಬರ್ ಒತ್ತಾಯಿಸಿದ್ದರು ಎಂದು ಬೆಡ್ಗೆ ಆರೋಪಿಸಿದ್ದಾರೆ.
ಬೆಡ್ಗೆ ಅವರ ಆರೋಪದ ಮೇರೆಗೆ ಮುಂಬೈ ಪೊಲೀಸರು ಬಾಬರ್ ಅವರನ್ನು ಬಂಧಿಸಿದ್ದಾರೆ.
Comments are closed.