ಕರ್ನಾಟಕ

ಎಟಿಎಂ ಯಂತ್ರದಲ್ಲಿ ಬಂಗಾರದ ನಾಣ್ಯಗಳು ದೊರೆಯುತ್ತವೆ!

Pinterest LinkedIn Tumblr

gold-armಬೆಂಗಳೂರು: ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಅನ್ನು ಈ ಎಟಿಎಂ ಯಂತ್ರದಲ್ಲಿ ಸ್ವೈಪ್‌ ಮಾಡಿದರೆ ಬೇಡಿದಷ್ಟು ಬಂಗಾರದ ನಾಣ್ಯಗಳು ಹೊರ ಬರುತ್ತವೆ.

ಹಬ್ಬದ ಸಮಯದಲ್ಲಿ ಚಿನ್ನದ ನಾಣ್ಯಗಳ ಖರೀದಿ ಮಾಡುವವರಿಗೆ ಉತ್ತಮ ಆಯ್ಕೆಯಂತೆ ತೋರುತ್ತಿದೆ ಬಂಗಾರ ಉಸುರುವ ಈ ಎಟಿಎಂ. ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಅಥವಾ ನಗದನ್ನು ಬಳಸಿ ಅಗತ್ಯವಿರುವಷ್ಟು ಚಿನ್ನದ ನಾಣ್ಯಗಳನ್ನು ಖರೀದಿಸುವ ವ್ಯವಸ್ಥೆಯನ್ನು ಆಭರಣಗಳ ಸಂಸ್ಥೆ ಬ್ಲೂಸ್ಟೋನ್‌ ಪ್ರಾರಂಭಿಸಿದೆ.

1 ಗ್ರಾಂ ನಿಂದ 20 ಗ್ರಾಂವರೆಗಿನ ಚಿನ್ನದ ನಾಣ್ಯಗಳು ಲಭ್ಯವಿದ್ದು, ಮಾರುಕಟ್ಟೆ ಬೆಲೆಯಷ್ಟು ಹಣವನ್ನು ಎಂಟಿಎಂ ಮೂಲಕ ಸಂದಾಯ ಮಾಡಿ ನಾಣ್ಯ ಪಡೆಯಬಹುದು. ನಾಣ್ಯದೊಂದಿಗೆ ಶುದ್ಧತೆ ಪ್ರಮಾಣಪತ್ರವನ್ನೂ ಯಂತ್ರ ನೀಡುತ್ತದೆ.

ದೀಪಾವಳಿ ಹಬ್ಬದ ಪ್ರಯುಕ್ತ ನಗರದಲ್ಲಿ ಮಾತ್ರ ಚಿನ್ನದ ನಾಣ್ಯ ನೀಡುವ ಯಂತ್ರವನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ.

Comments are closed.