ಕರ್ನಾಟಕ

ವಿಧಾನಸೌಧಕ್ಕೆ ಬಂದ ವೋಕ್ಸ್‌ವ್ಯಾಗನ್‌ ಕಾರಿನಲ್ಲಿ ₹2.5 ಕೋಟಿ!

Pinterest LinkedIn Tumblr

carಬೆಂಗಳೂರು: ವೋಕ್ಸ್‌ವ್ಯಾಗನ್‌ ಕಾರಿನಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ₹2.5 ಕೋಟಿ ಹಣವನ್ನು ವಿಧಾನಸೌಧ ಆವರಣದಲ್ಲಿ ವಶಕ್ಕೆ ಪಡೆದಿರುವ ಘಟನೆ ಇಂದು ನಡೆದಿದೆ.

ಕೆಂಗಲ್‌ ಹನುಮಂತಯ್ಯ ಮುಖ್ಯದ್ವಾರದ ಮೂಲಕ ವಿಧಾನಸೌಧ ಪ್ರವೇಶಿಸಲು ಮುಂದಾದ KA-04 MM-9018 ಸಂಖ್ಯೆಯ ವೋಕ್ಸ್‌ವ್ಯಾಗನ್‌ ಕಾರನ್ನು ರಕ್ಷಣಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ.

ಮಧ್ಯಾಹ್ನ 2.30ಕ್ಕೆ ಬಂದ ಕಾರಿನಲ್ಲಿ ಮೂರು ಬಾಕ್ಸ್ ಗಳಲ್ಲಿ ಹಣವನ್ನಿರಿಸಲಾಗಿತ್ತು.

ಕಾರಿನ ಮಾಲಿಕ ಧಾರವಾಡ ಮೂಲ ವಕೀಲ ಸಿದ್ದಾರ್ಥ್ ಅವರನ್ನು ವಶಕ್ಕೆ ಪಡೆದಿರುವ ಪೋಲೀಸರು, ಡಿಸಿಪಿ ಕಚೇರಿಯಲ್ಲಿ ಭದ್ರತಾ ಡಿಸಿಪಿ ಯೋಗೇಶ್ ಮತ್ತು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಟೇಲ್ ವಿಚಾರಣೆಗೊಳಪಡಿಸಿದ್ದಾರೆ.

ಟೆಂಡರ್ ಸಂಬಂಧ ಸಚಿವರೊಬ್ಬರಿಗೆ ನೀಡಲು ಈ ಹಣ ತಂದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Comments are closed.