ಮನೋರಂಜನೆ

‘ರಾಮಾ ರಾಮಾ ರೇ’ ಚಿತ್ರದ ಹಾಡಿಗೆ ವಾಟ್ಸ್‌ಅಪ್ ಚಾಟಿಂಗ್ ಟಚ್

Pinterest LinkedIn Tumblr

ramaramaಬೆಂಗಳೂರು: ಇಂದು ತೆರೆಕಂಡ ‘ರಾಮಾ ರಾಮಾ ರೇ’ ಚಿತ್ರದ ‘ಕೇಳು ಕೃಷ್ಣಾ ಹಾಡು’ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಸಿನಿಮಾದ ಆಡಿಯೋ ರಿಲೀಸ್ ಆದಾಗಲೇ ಈ ಹಾಡು ಕೇಳುಗರ ಮನಸೂರೆಗೊಂಡಿತ್ತು. ಇದೀಗ ಈ ಹಾಡಿಗೆ ವಾಟ್ಸ್‌ಅಪ್ ಚಾಟಿಂಗ್ ಟಚ್ ನೀಡುವ ಮೂಲಕ ಪ್ರಸ್ತುತ ಸಿನಿಮಾ ತಂಡ ಗಮನ ಸೆಳೆದಿದೆ.

ಸಿನಿಮಾ ತೆರೆ ಕಾಣುವ ಮುನ್ನಾ ದಿನ ಸಾಮಾಜಿಕ ತಾಣದಲ್ಲಿ ‘ಕೇಳು ಕೃಷ್ಣಾ’ ಹಾಡಿನ ಸಾಹಿತ್ಯವನ್ನು ವಾಟ್ಸ್‌ಅಪ್ ಪರಿಭಾಷೆಯಲ್ಲಿ ವ್ಯಕ್ತಪಡಿಸಿ ಗಮನ ಸೆಳೆಯಲಾಗಿದೆ.

‘ರಾಮಾ ರಾಮಾ ರೇ’ ಸಿನಿಮಾ ಬಿಡುಗಡೆಯಾಗಿರುವ ಹೊತ್ತಲ್ಲಿ ಸಿನಿಮಾದ ಪ್ರಚಾರಕ್ಕಾಗಿ ಮಾಡಿದ ಈ ವಿಡಿಯೊ ಸಾಮಾಜಿಕ ತಾಣಲ್ಲಿ ವೈರಲ್ ಆಗಿರುವುದು ‘ರಾಮಾ ರಾಮಾ ರೇ’ ತಂಡಕ್ಕೆ ಸಿಕ್ಕಿದ ಪ್ಲಸ್ ಪಾಯಿಂಟ್.

Comments are closed.