ಮನೋರಂಜನೆ

ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಹಾಲಿವುಡ್ ಸ್ಟಾರ್ ಗೆ ಪಶ್ಚಾತ್ತಾಪ

Pinterest LinkedIn Tumblr

piers-brosnenಲಾಸ್ ಏಂಜಲೀಸ್: ಹಾಲಿವುಡ್ ಸ್ಟಾರ್ ಪೀರ್ಸ್ ಬ್ರೊಸ್ನನ್ ಗೆ ಭಾರತದ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಪಶ್ಚಾತ್ತಾಪವಾಗಿದೆಯಂತೆ.

ಪಾನ್ ಮಸಾಲೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ವಸ್ತುವಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಾರದಿತ್ತು ಎನ್ನುತ್ತಿದ್ದಾರೆ ಪೀರ್ಸ್. ಇದು ಮೊದಲೇ ಗೊತ್ತಿದ್ದರೆ ಖಂಡಿತಾ ಉತ್ಪನ್ನದ ರಾಯಭಾರಿಯಾಗುತ್ತಿರಲಿಲ್ಲ ಎಂದಿದ್ದಾರೆ.

ಒಪ್ಪಂದ ಮಾಡಿಕೊಳ್ಳುವಾಗ ಈ ಉತ್ಪನ್ನದಲ್ಲಿ ತಂಬಾಕು ಅಥವಾ ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ಅಂಶಗಳ ಬಗ್ಗೆ ಉಲ್ಲೇಖವಿರಲಿಲ್ಲ. ಹಾಗಾಗಿ ಒಪ್ಪಿಕೊಂಡಿದ್ದೆ. ಅಲ್ಲದೆ ನನ್ನ ಮೊದಲ ಪತ್ನಿ ಮತ್ತು ಮಗಳು ಕ್ಯಾನ್ಸರ್ ರೋಗದಿಂದಾಗಿ ತೀರಿಕೊಂಡ ಬಳಿಕ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಈ ಉತ್ಪನ್ನ ಹೀಗಿದೆ ಎಂದು ಗೊತ್ತಿದ್ದರೆ ಖಂಡಿತಾ ಪ್ರಚಾರ ರಾಯಭಾರಿಯಾಗುತ್ತಿರಲಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ನಟ ಭಾರತದಲ್ಲಿ ಈ ಉತ್ಪನ್ನದ ಮೇಲೆ ಪ್ರಕಟವಾಗುವ ತನ್ನ ಚಿತ್ರವನ್ನು ತೆಗೆದು ಹಾಕಲು ಸಂಸ್ಥೆಗೆ ಸೂಚಿಸಿದ್ದಾರೆ.

Comments are closed.