ಕರ್ನಾಟಕ

‘ಮಹದಾಯಿ’ ಕುರಿತು ಗೋವಾ ತೆಗೆದಿರುವ ಹೊಸ ವರಸೆ ಏನು ? ಇಲ್ಲಿದೆ ವರದಿ….

Pinterest LinkedIn Tumblr

mahadayi-river

ಧಾರವಾಡ: ಒಂದು ಕಡೆ ಕಾವೇರಿ ವಿವಾದಧಲ್ಲಿ ತಮಿಳುನಾಡು ನಮ್ಮ ರಕ್ತ ಹೀರುತ್ತಿದ್ದರೆ ಅತ್ತ ಮಹದಾಯಿ ನದಿ ವಿಚಾರದಲ್ಲಿ ಗೋವಾ ಮತ್ತೊಂದು ತಗಾದೆ ತೆಗೆದಿದೆ. ಕರ್ನಾಟಕ ಮಲಪ್ರಭಾ ನದಿಯ ಉಪನದಿ ಬೆಣ್ಣೆ ಹಳ್ಳದ ನೀರಿನ ಬಳಕೆಯಲ್ಲಿ ವಿಫಲವಾಗಿದೆ. ಹೀಗಿರುವಾಗ ಮಹದಾಯಿ ನೀರು ಯಾಕೆ ಅನ್ನೋ ಹೊಸ ವರಸೆ ಶುರು ಮಾಡಿದೆ.

ಸೋಮವಾರ ಮಹದಾಯಿ ನ್ಯಾಯಮಂಡಳಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೊಸ ಕಿರಿಕ್ ತೆಗೆದಿದೆ. ಬೆಣ್ಣೆಹಳ್ಳ 5,048 ಚದರ ಕಿಮೀ ವ್ಯಾಪ್ತಿ ಹೊಂದಿದ್ದು 10.92 ಟಿಎಂಸಿ ನೀರು ಸಿಗುತ್ತದೆ. ಅಂದರೆ ಬೆಣ್ಣೆಹಳ್ಳದ ವ್ಯಾಪ್ತಿ ಮಹದಾಯಿಗಿಂತ ದುಪ್ಪಟ್ಟು. ಆದರೆ ಬೆಣ್ಣೆಹಳ್ಳದಲ್ಲಿ 10.92 ಟಿಎಂಸಿ ನೀರಿದ್ದರೂ ಕರ್ನಾಟಕ ಬಳಕೆ ಮಾಡ್ತಿರುವುದು 1.5 ಟಿಎಂಸಿ ಮಾತ್ರ. ತನ್ನಲೇ 7 ಟಿಎಂಸಿ ನೀರು ಇಟ್ಕೊಂಡು ಮಹದಾಯಿ ನೀರನ್ನು ಕೇಳುತ್ತಿದೆ ಎಂಬ ಹೊಸ ಆಕ್ಷೇಪ ಎತ್ತಿದೆ.

ಕರ್ನಾಟಕ ಹೆಚ್ಚಿಗೆ ನೀರು ಬಳಸುವಂತ ಬೆಳೆಗಳನ್ನು ಬೆಳೆಯುತ್ತಿದೆ. ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೂ ಭಾರೀ ಪ್ರಮಾಣದ ನೀರು ಪೂರೈಸುತ್ತಿದೆ ಎಂದು ಗೋವಾ ಹೊಸದಾಗಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆರೋಪಿಸಿದೆ.

Comments are closed.