ರಾಷ್ಟ್ರೀಯ

ಬಿಎಸ್ಎನ್ಎಲ್ – ಜಿಯೊ ನಡುವೆ ನಡೆದ ಒಪ್ಪಂದ ಏನು ? ಇಲ್ಲಿದೆ ಓದಿ…

Pinterest LinkedIn Tumblr

bsnl-jio

ನವದೆಹಲಿ: ಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ‘ರಿಲಯನ್ಸ್ ಜಿಯೋ’ಗೆ ಪೈಪೋಟಿ ನೀಡಲು ಇತರೆ ಕಂಪನಿಗಳು ಸಜ್ಜಾಗಿವೆ. ದರ ಸಮರವನ್ನು ಎದುರಿಸಲು ಸಿದ್ಧತೆ ನಡೆಸಿವೆ. ಜಿಯೋ ಹಾಗೂ ಬಿ.ಎಸ್.ಎನ್.ಎಲ್. ನಡುವೆ ಗ್ರಾಹಕರ ಅನುಕೂಲತೆ ದೃಷ್ಠಿಯಿಂದ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ.

ರೋಮಿಂಗ್ ವೇಳೆ ಡೇಟಾ ಮತ್ತು ಕಾಲಿಂಗ್ ಸೇವೆಗೆ ಸಂಬಂಧಿಸಿದಂತೆ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಬಿ.ಎಸ್.ಎನ್.ಎಲ್. ಗ್ರಾಹಕರು, ರೋಮಿಂಗ್ ಸಂದರ್ಭದಲ್ಲಿ ಜಿಯೋ 4 ಜಿ ಇಂಟರ್ ನೆಟ್ ಸೇವೆ ಪಡೆಯಬಹುದಾಗಿದೆ. ಅದೇ ರೀತಿ ರಿಲಯನ್ಸ್ ಜಿಯೋ ಬಳಕೆದಾರರು ನೆಟ್ ವರ್ಕ್ ಇಲ್ಲದ ಕಡೆಗಳಲ್ಲಿ ಬಿ.ಎಸ್.ಎನ್.ಎಲ್. 2 ಜಿ ಸೇವೆ ಪಡೆದುಕೊಳ್ಳಬಹುದಾಗಿದೆ.

ಜಿಯೋ ಗ್ರಾಹಕರು ನೆಟ್ ವರ್ಕ್ ಇಲ್ಲದ ಸ್ಥಳಗಳಲ್ಲಿ ವಾಯ್ಸ್ ಕಾಲ್ ಗಾಗಿ ಬಿ.ಎಸ್.ಎನ್.ಎಲ್. 2 ಜಿ ಸೇವೆ ಪಡೆಯಬಹುದಾಗಿದ್ದು, ಈ ಕುರಿತಂತೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

Comments are closed.