ಕರ್ನಾಟಕ

ಚೂಡಕರಣ ಮಹತ್ವ ಹಾಗೂ ಹಿಂದೂ ಧರ್ಮದ ಶ್ರೇಷ್ಠತೆ ಬಗೆಗಿನ ಮಾತು.

Pinterest LinkedIn Tumblr

kesh_mundana_pic

ಮಂಗಳೂರು: ಹಿಂದೂ ಧರ್ಮದಲ್ಲಿ ಕೇಶ ಮುಂಡನಾ ಅಥವಾ ಚೂಡಕರಣ ಹೆಚ್ಚು ಅಗತ್ಯವಾಗಿರುವ ಮತ್ತು ಅತ್ಯಗತ್ಯವಾಗಿ ಪಾಲಿಸಬೇಕಾಗಿರುವ ಕ್ರಮ ಎಂದೆನಿಸಿದೆ. ಮುಂಡನ ಎಂಬ ಸಂಸ್ಕೃತ ಪದದಿಂದ ಚೂಡಕರಣ ಎಂಬ ಪದ ವಿಭಾಗಿಸಲ್ಪಟ್ಟಿದ್ದು ಮಗುವಿನ ಮೊದಲ ಕೇಶ ಮುಂಡನಾ ಎಂಬುದಾಗಿ ಪ್ರಚಲಿತದಲ್ಲಿದೆ.

ಹಿಂದೂ ಧರ್ಮದಲ್ಲಿ ಹೆಚ್ಚು ಅಗತ್ಯವಾಗಿ ಕ್ರಮ ಪ್ರಕಾರವಾಗಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದು ಮಗುವಿನ ಪೋಷಕರು ಈ ಪದ್ಧತಿಯನ್ನು ಮಗುವಿಗೆ ಎರಡು ಮೂರು ವರ್ಷಗಳಾದಾಗ ಪುಣ್ಯ ಕ್ಷೇತ್ರಗಳಲ್ಲಿ ನಡೆಸುತ್ತಾರೆ. ಕೇಶ ಮುಂಡನದ ಸಮಯದಲ್ಲಿ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸುತ್ತಾರೆ, ಶಿಖೆಯನ್ನು ಹಾಗೆಯೇ ಬಿಡುತ್ತಾರೆ. ಕೂದಲಿನ ಕಿರೀಟವಾಗಿ ಈ ಶಿಖೆ ಇರುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಕೂದಲು ಮೂಲತಃ ಹಿಂದಿನ ಜನ್ಮದ ಮುಂದುವರಿಕೆ ಎಂದಾಗಿದೆ.

ಇದು ಪ್ರಸ್ತುತ ಬದುಕಿಗೆ ಕೆಟ್ಟದ್ದಾಗಿರುವುದರಿಂದ ಈ ಮುಂಡನ ಕ್ರಿಯೆಯನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಚೂಡಕರಣ ಪ್ರಕ್ರಿಯೆಯು ಹಿಂದಿನ ಜನ್ಮದಲ್ಲಿ ಈಡೇರಿಸಿಕೊಳ್ಳಲಾಗದೇ ಇರುವ ಆಸೆಗಳನ್ನು ತ್ಯಜಿಸುವುದು ಎಂಬುದಾಗಿ ಅರ್ಥವನ್ನು ಪಡೆದುಕೊಂಡಿದೆ. ಹಿಂದಿನ ಜನ್ಮದ ಕರ್ಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಎಂಬುದೂ ಇದರಲ್ಲಿ ಅಡಕವಾಗಿದೆ.

ಮುಂಡನ ಕ್ರಿಯೆಯು ನಡೆದ ನಂತರ, ಒಂದು ವರ್ಷದ ಮಗುವು ಭವಿಷ್ಯದ ಜೀವನದಲ್ಲಿ ಮುಂದುವರಿಯುತ್ತದೆ. ಹಿಂದಿನ ಜೀವನದಿಂದ ಪ್ರಸ್ತುತ ಜೀವನಕ್ಕೆ ಅಡಿ ಇಡುತ್ತದೆ ಎಂಬ ಅರ್ಥವೂ ಇದೆ. ಹಿಂದಿನ ಜೀವನದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದು ಮುಂದಿನ ಜೀವನಕ್ಕೆ ಅಡಿ ಇಡುವುದು ಎಂದಾಗಿದೆ.

ಕೇಶ ಮುಂಡನವನ್ನು ಎಲ್ಲಿ ಮಾಡಲಾಗುತ್ತದೆ?
ಹಿಂದೂ ಧರ್ಮದಲ್ಲಿ ಕೇಶ ಮುಂಡನವು ದೊಡ್ಡ ಸಂಪ್ರದಾಯ ಎಂದೆನಿಸಿದೆ. ಹೃಷಿಕೇಶ ಮತ್ತು ಹರಿದ್ವಾರಗಳಂತಹ ಪುಣ್ಯ ಕ್ಷೇತ್ರದಲ್ಲಿ ಇದನ್ನು ನಡೆಸಲಾಗುತ್ತದೆ.

ಇಂದಿನ ದಿನಗಳಲ್ಲಿ ಹೆಚ್ಚಿನ ಕುಟುಂಬದವರು ಪುರೋಹಿತರನ್ನು ಮನೆಗೆ ಆಹ್ವಾನಿಸಿ ಇದನ್ನು ಸ್ವಗೃಹದಲ್ಲಿಯೇ ನೆರವೇರಿಸುತ್ತಾರೆ. ಕೇಶಮುಂಡನಕ್ಕೆ ಲಿಂಗ ಬೇಧವಿರುವುದಿಲ್ಲ. ಮಗುವಿನ ಮೇಲೆ ಈ ಕ್ರಿಯೆಯನ್ನು ನಡೆಸುವಾಗ, ಪುರೋಹಿತರು ಮಂತ್ರವನ್ನು ಉಚ್ಛರಿಸುತ್ತಾರೆ ನಂತರ ತಲೆಯಲ್ಲಿ ಒಂದೆರಡು ಕೂದಲನ್ನು ಬಿಡುತ್ತಾರೆ.

ಕೇಶಮುಂಡನದ ಬಳಿಕ ನಡೆಯುವ ಶಾಸ್ತ್ರವೇನು?
ಚೂಡಕರಣದ ನಂತರ ಪವಿತ್ರ ನದಿ ಗಂಗೆಗೆ ಕೂದಲನ್ನು ಅರ್ಪಿಸಲಾಗುತ್ತದೆ. ಪವಿತ್ರ ನದಿಯ ಬಳಿಯೇ ಈ ಕ್ರಿಯೆಯನ್ನು ನಡೆಸುವುದರಿಂದ ಕೂಡಲೇ ಕೂದಲನ್ನು ಗಂಗೆಗೆ ಹರಿಯಬಿಡಲಾಗುತ್ತದೆ. ಇಲ್ಲವೇ ಆಚರಣೆಯನ್ನು ವಿಧಿ ವತ್ತಾಗಿ ಪೂರೈಸಿದ ನಂತರ ನದಿಗೆ ಕೂದಲನ್ನು ಅರ್ಪಿಸಲಾಗುತ್ತದೆ.

ಹಿಂದೂ ಧರ್ಮ ಎಲ್ಲ ಧರ್ಮಕ್ಕಿಂತ ಶ್ರೇಷ್ಠ ಎಕೆ?

ಹಿಂದೂ ಧರ್ಮವು ತನ್ನದೇ ಆದ ವಿಶೇಷತೆಗಳಿಂದ ಪ್ರಪಂಚದಲ್ಲಿ ಅಗ್ರಮಾನ್ಯ ಸ್ಥಾನವನ್ನು ಪಡೆದುಕೊಂಡಿದೆ. ನಾವು ನಡೆಸಿಕೊಂಡು ಬರುತ್ತಿರುವ ಪೂಜಾ ವಿಧಿಗಳು, ಹಬ್ಬಗಳು, ಆಚರಣೆಗಳು, ಸಂಸ್ಕಾರಗಳು ಹೀಗೆ ನಮ್ಮಲ್ಲಿ ವೈವಿಧ್ಯತೆಗಳು ಪ್ರಪಂಚದ ಮೂಲೆಮೂಲೆಗಳಲ್ಲಿ ಪ್ರಸಿದ್ಧತೆಯನ್ನು ಹೆಚ್ಚಿಸಿಕೊಳ್ಳಲು ಕಾರಣವಾಗಿದೆ ಮತ್ತು ನಮ್ಮ ಧರ್ಮಕ್ಕೆ ಬಲವಾದ ಅಡಿಪಾಯವನ್ನು ಹಾಕಿಕೊಟ್ಟಿದೆ. ವಿದೇಶಿಗರೂ ನಮ್ಮ ಧರ್ಮವನ್ನು ಮೆಚ್ಚಿ ಗೌರವಿಸಿ ಅದನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಂಕುಮವನ್ನು ಧರಿಸಿಕೊಳ್ಳುವುದು, ಸೀರೆಯನ್ನು ಧರಿಸಿಕೊಳ್ಳುವುದು, ಪೂಜೆ ಪುನಸ್ಕಾರಗಳನ್ನು ಮಾಡುವುದು ಹೀಗೆ ಹಿಂದೂಧರ್ಮವನ್ನು ಅವರೂ ಹಿಂಬಾಲಿಸಿ ಅನುಯಾಯಿಗಳಾಗುತ್ತಿದ್ದಾರೆ.

ಹಿಂದೂ ಧರ್ಮದಲ್ಲಿ ನಡೆಸುವ ಪೂಜಾ ವಿಧಿ ವಿಧಾನಗಳು ತನ್ನದೇ ಆದ ಆಚಾರ ವಿಚಾರಗಳನ್ನು ಒಳಗೊಂಡಿದೆ. ಶ್ರದ್ಧೆ ಏಕಾಗ್ರತೆಯನ್ನು ಪಡೆದುಕೊಂಡಿರುವ ಪೂಜಾ ವಿಧಿ ವಿಧಾನಗಳನ್ನು ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬರುತ್ತಿದ್ದೇವೆ. ದೇವರ ಮೂರ್ತಿ ಇಲ್ಲವೇ ದೇವರ ಫೋಟೋವನ್ನಿಟ್ಟುಕೊಂಡು ನಡೆಸುವ ಈ ಪೂಜೆಗಳು ತಮ್ಮದೇ ಆದ ಪ್ರತ್ಯೇಕತೆಯಿಂದ ಧಾರ್ಮಿಕ ನೆಲೆಗಟ್ಟಿನಲ್ಲಿ ನೆಲೆಗೊಂಡಿವೆ. ಪೂಜೆ ನಡೆಸುವಾಗ ಪಠಿಸುವ ಮಂತ್ರಗಳಿರಬಹುದು ಆರಾಧನೆಗಳಿರಬಹುದು, ಹೂವು ಇಲ್ಲವೇ ನೈವೇದ್ಯದ ಅರ್ಪಣೆಯಾಗಿರಬಹುದು ಪ್ರತಿಯೊಂದೂ ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿದೆ. ಇಂದಿನ ಲೇಖನದಲ್ಲಿ ಆ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತಿದ್ದು ಅದು ಏನು ಎಂಬುದನ್ನು ಮುಂದೆ ಓದಿ…

ದೇವರ ವಿಗ್ರಹ ಪೂಜೆ
ವೇದಗಳ ಪ್ರಕಾರ ವಿಗ್ರಹಾರಾಧನೆ ಎನ್ನುವುದು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವ ಅತ್ಯಂತ ಕೆಳ ಹಂತದ ಅಥವಾ ಮೊದಲನೆ ಮಾರ್ಗವಾಗಿದೆ. ವಿಗ್ರಹವು ದೇವರ ದೈಹಿಕ ಕಾಯವಾಗಿದೆ. ಇದು ಮಾನವರಿಗೆ ದೇವರ ಕುರಿತಾದ ಕಲ್ಪನೆಯನ್ನು ನೀಡಿ, ಭಕ್ತಿಗೆ ಅಗತ್ಯವಾದ ಏಕಾಗ್ರತೆಯನ್ನು ಒದಗಿಸುತ್ತದೆ. ಇಲ್ಲಿ ಭಕ್ತಾಧಿಗಳು ಮೊದಲು ದೇವರ ವಿಗ್ರಹವನ್ನು ನೋಡುತ್ತಾರೆ. ಆಗ ಅವರ ಏಕಾಗ್ರತೆಯು ದೇವರ ಮೇಲೆ ಸ್ಥಿರಗೊಳ್ಳುತ್ತದೆ, ನಂತರ ಅವರ ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡಲು ಶುರು ಮಾಡುತ್ತಾರೆ. ಕೊನೆಗೆ ಅವನು ದೈವದ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ.

Vishwakarma pooja dubai _Nov 15_2015-047

ಆರತಿಯನ್ನು ಬೆಳಗಿಸುವುದು
ಹಿ೦ದೂ ಧರ್ಮದಲ್ಲಿ ಆಚರಿಸಲ್ಪಡುವ ಹಲವಾರು ಪೂಜಾ ವಿಧಿ ವಿಧಾನಗಳ ಪೈಕಿ ಆರತಿಯು ಒ೦ದು ಅವಿಭಾಜ್ಯ ಅ೦ಗವಾಗಿದೆ. ಪೂಜೆಗೆ ಸ೦ಬ೦ಧಿಸಿದ ಎಲ್ಲಾ ವಿಧಿಗಳನ್ನು ಪೂರೈಸಿದ ಬಳಿಕ ಸಾಮಾನ್ಯವಾಗಿ ಆರತಿಯನ್ನು ಬೆಳಗಲಾಗುತ್ತದೆ. ಆರತಿಯನ್ನು ಕೈಗೊಳ್ಳುವುದರ ಉದ್ದೇಶವೇನೆ೦ದರೆ, ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಅದ್ದಿರುವ ಬತ್ತಿಗಳನ್ನು ಬೆಳಗಿ ದೇವರ ಮು೦ದೆ ದೀನತೆ ಮತ್ತು ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸುತ್ತಾ ಈ ಸ೦ದರ್ಭದಲ್ಲಿ ಭಗವಧ್ಭಕ್ತರು ದೇವರ ದೈವಿಕ ರೂಪದಲ್ಲಿ ಲೀನವಾಗುವುದಕ್ಕೆ ಒ೦ದು ಮಾರ್ಗೋಪಾಯನ್ನು ಕಲ್ಪಿಸಿಕೊಡುವುದೇ ಆರತಿಯ ಉದ್ದೇಶ.

pooja_flower_photo

ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವುದು
ಒಂದು ಕಾಲದಲ್ಲಿ, ಹಿಂದೂ ಧರ್ಮದಲ್ಲಿ ಪ್ರಾಣಿಬಲಿ ಹಾಗೂ ನರಬಲಿಗಳು ಸರ್ವೇಸಾಮಾನ್ಯವಾಗಿದ್ದವು. ಆದಿಶಂಕರಾಚಾರ್ಯರ ರಂಗಪ್ರವೇಶವಾದಾಗ ಅವರು ಪ್ರಾಣಿ ಬಲಿ ಹಾಗೂ ನರ ಬಲಿಗಳಂತಹ ಅಮಾನವೀಯ ಆಚರಣೆಗಳನ್ನು ಅಲ್ಲಿಗೇ ತಡೆದು ಅದರ ಬದಲಿಗೆ ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವ ಸತ್ಸಂಪ್ರದಾಯವನ್ನು ಜಾರಿಗೆ ತಂದರು.

ತೆಂಗಿನ ಕಾಯಿಯು ಮಾನವನ ತಲೆಯನ್ನು ಅನೇಕವಿಧಗಳಲ್ಲಿ ಹೋಲುತ್ತದೆ.-ಹೊರಭಾಗದಲ್ಲಿರುವ ನಾರನ್ನು ಮಾನವನ ತಲೆಕೂದಲಿಗೂ, ಅದರ ಗಟ್ಟಿಯಾದ ಹೊರಪದರ ಅಥವಾ ಚಿಪ್ಪನ್ನು ಮಾನವನ ತಲೆಬುರುಡೆಗೂ, ಕಾಯಿಯೊಳಗಿರುವ ನೀರನ್ನು ಮಾನ ದೇಹದಲ್ಲಿ ಪ್ರವಹಿಸುತ್ತಿರುವ ರಕ್ತಕ್ಕೂ, ಹಾಗೂ ಒಳಗಿನ ಬಿಳಿಯ ಪದರವನ್ನು ತಲೆಯೊಳಗಿನ ಅವಕಾಶಕ್ಕೂ ಹೋಲಿಕೆ ಮಾಡಲಾಗುತ್ತದೆ.  ಅಲ್ಲಿದೆ ತೆಂಗಿನಕಾಯಿಯನ್ನು ಸಂಸ್ಕೃತದಲ್ಲಿ “ಶ್ರೀಫಲ” ಎಂದು ಕರೆಯುತ್ತಾರೆ. ಶ್ರೀ ಫಲ ಎಂದರೆ ದೇವರ ಫಲ ಎಂದರ್ಥ. ಹಾಗಾಗಿ ತೆಂಗಿನಕಾಯಿ ದೇವರಿಗೆ ಅತ್ಯಾವಶ್ಯಕವಾದ ಹಣ್ಣಾಗಿ ಗುರುತಿಸಲ್ಪಟ್ಟಿದೆ.

ತೆಂಗಿನಕಾಯಿಯನ್ನು ಒಡೆಯುವುದು ನಿಮ್ಮ ಅಹಂ ಅನ್ನು ತ್ಯಜಿಸಿ, ದೇವರಲ್ಲಿ ಶರಣಾಗುವುದನ್ನು ತಿಳಿಸುವ ವಿಧಾನ ಇದಾಗಿದೆ. ಅಜ್ಞಾನ ಮತ್ತು ಅಹಂ ಎಂಬ ತೆಂಗಿನಕಾಯಿಯನ್ನು ಒಡೆದರೆ ಅದರಲ್ಲಿರುವ ಬಿಳಿಯ ಭಾಗದಂತೆ ಜ್ಞಾನವು ಸಹ ನಮಗೆ ಕಾಣುತ್ತದೆ ಎಂಬ ತತ್ವ ಇದರಲ್ಲಿ ಅಡಗಿದೆ.

ಪೂರ್ಣ ಕುಂಭ:
ಪೂರ್ಣ ಕುಂಭ ಮಣ್ಣಿನ ಮಡಿಕೆ ಅಥವಾ ಬಿಂದಿಗೆಯನ್ನು “ಪೂರ್ಣ ಕುಂಭ” ಎಂದು ಕರೆಯಲಾಗುತ್ತದೆ. ಇದರಲ್ಲಿ ಪೂರ್ಣ ಪ್ರಮಾಣದ ನೀರು ಇರಬೇಕು, ತಾಜಾ ಮಾವಿನ ಎಲೆಗಳನ್ನು ಇದಕ್ಕೆ ಕಟ್ಟಿರಬೇಕು ಮತ್ತು ಇದರ ಮೇಲೆ ಒಂದು ತೆಂಗಿನಕಾಯಿಯನ್ನು ಇಟ್ಟಿರಬೇಕು. ಇದನ್ನು ಸಾಮಾನ್ಯವಾಗಿ ಮುಖ್ಯ ದೇವರ ಮುಂದೆ ಅಥವಾ ಪೂಜೆ ಮಾಡುವ ಸ್ಥಳದಲ್ಲಿ ಪೂಜೆ ಆರಂಭಿಸುವ ಮೊದಲು ಇರಿಸಿರುತ್ತಾರೆ. ಪೂರ್ಣ ಕುಂಭ ಎಂದರೆ ತುಂಬಿದ ಮಡಿಕೆ ಎಂದರ್ಥ. ಇಲ್ಲಿ ಆ ಬಿಂದಿಗೆ ಅಥವಾ ಕುಂಭವು ಭೂದೇವಿಯನ್ನು, ನೀರು ಎಂಬುದು ಜೀವ ಜಲವನ್ನು, ಎಲೆಗಳು ಜೀವನವನ್ನು ಮತ್ತು ತೆಂಗಿನಕಾಯಿಯು ದೇವರ ಪ್ರಜ್ಞೆಯನ್ನು ಪ್ರತಿನಿಧಿಸುತ್ತವೆ.

Comments are closed.