ಕರ್ನಾಟಕ

ಮದುವೆಗೂ ತಾಗಿದ ‘ಕಾವೇರಿ’ ಬಿಸಿ…. ಕೊನೆಗೂ ನಡೆದುಕೊಂಡು ಹೋಗಿಯೇ ಮದುವೆಯಾದರು !

Pinterest LinkedIn Tumblr

21

ಹೊಸೂರು: ಕಾವೇರಿ ಗಲಭೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸರು 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಇದರ ಬಿಸಿ ಮದುವೆಗೆ ತಯಾರಾಗಿದ್ದ ವಧು ವರರಿಗೂ ತಟ್ಟಿದೆ.

ರಂಜಿತ್ ಮತ್ತು ಸೌಮ್ಯ ಬುಧವಾರ ಬೆಳಗ್ಗೆ ಕರ್ನಾಟಕದಲ್ಲೇ ವಿವಾಹ ನಡೆಯಬೇಕಿತ್ತು.ಆದರೆ ಬೆಂಗಳೂರಿನಲ್ಲಿ ಉಂಟಾದ ಕಾವೇರಿ ಗಲಾಟೆಯಿಂದಾಗಿ ಇಲ್ಲಿ ಮದುವೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ತಮ್ಮ ಮದುವೆಯನ್ನು ತಮಿಳುನಾಡಿನಲ್ಲೇ ಮಾಡಿಕೊಳ್ಳಲು ಯೋಜಿಸಿದ್ದರು. ಆದರೆ ತಮ್ಮ ಊರಿಗೆ ತೆರಳಲು ಬಸ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಜೆಸಿ ನಗರದಿಂದ ಅತ್ತಿಬೆಲೆ ವರೆಗೂ ಬಸ್ ನಲ್ಲಿ ಬಂದ ಜೋಡಿ, ಅಲ್ಲಿಂದ ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ವರೆಗೂ ಆಟೋದಗಲ್ಲಿ ಬಂದು, ಅಲ್ಲಿಂದ ಸುಮಾರು 300 ಮೀಟರ್ ವರೆಗೂ ಬಸ್ ಗಾಗಿ ನಡೆದು ಕೊಂಡೇ ಸಾಗಿದ ದೃಶ್ಯ ಕಂಡು ಬಂತು. ನಂತರ ಕರ್ನಾಟಕ ಗಡಿ ದಾಟಿ ತಮಿಳುನಾಡು ಬಸ್ ನಿಲ್ದಾಣಕ್ಕೆ ಸೇರಿ ಅಲ್ಲಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು.

ಇನ್ನೂ ಮತ್ತೊಬ್ಬ ವಧು ಪ್ರೇಮ ಎಂಬಾಕೆಗೆ ವಿವಾಹ ನಿಶ್ಚಯವಾಗಿದ್ದು, ಬುಧುವಾರ ತಮಿಳುನಾಡಿನ ವಾನಿಯಂಬಾಡಿಯಲ್ಲಿ ಮದುವೆ ಏರ್ಪಾಡಿಗಿತ್ತು. ಆಕೆ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಲು ಹರಸಾಹಸ ಪಡಬೇಕಾಯಿತು. ಯಾವುದೇ ವಾಹನ ಸಿಗದ ಕಾರಣ ಪ್ರೇಮಾ ಕರ್ನಾಟಕ- ತಮಿಳುನಾಡು ಬಾರ್ಡರ್ ವರೆಗೂ ನಡೆದುಕೊಂಡೇ ಸಾಗಬೇಕಾದ ಅನಿವಾರ್ಯತೆ ಎದುರಾಯಿತು. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಹೋರಾಟದಿಂದಾಗಿ ವಧು ವರರಿಗೂ ಬಿಸಿ ಮುಟ್ಟಿಸಿತು.

Comments are closed.