ಬೆಂಗಳೂರು(ಆ.೧೫-ಕಾಮಗಾರಿ ಪರಿಶೀಲನೆ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸುನಂದಾ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜೆಪಿ ಪಾರ್ಕ್ ವಾರ್ಡ್ ಬಿಜೆಪಿ ಸದಸ್ಯರಾದ ಮಮತಾ ವಾಸುದೇವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಜೆಪಿಪಾಕ್‌ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಇಂದು ಮಧ್ಯಾಹ್ನ ೧೨.೩೦ರ ವೇಳೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಬಂದ ಸುನಂದಾ ಅವರು ಏಕಾಎಕಿ ನನ್ನ ಮೇಲೆ ಹಲ್ಲೆ ನಡೆಸಿದ್ದು ಕೈಗಳಿಗೆ ಗಾಯವಾಗಿದೆ ಎಂದು ಮಮತಾ ವಾಸುದೇವ ಅವರು ಯಶವಂತಪುರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರಿಗೆ ದೂರು ನೀಡಲು ಬಂದು ಮಮತಾ ಅವರು ಪೊಲೀಸ್ ಠಾಣೆಯಲ್ಲಿ ಕಣ್ಣೀರಿಡುತ್ತಾ ‘ಸುನಂದಾ ನನ್ನನ್ನು ಹಿಡಿದು ಎಳೆದಾಡಿ, ಮುಖದ ಮೇಲೆ ಗುದ್ದಿದ್ದಾರೆ’ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೆ ಸುನಂದಾ ಬೆಂಬಲಿಗರೂ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿದ್ದಾರೆ. ಶಾಸಕ ಮುನಿರತ್ನ ಕುಮ್ಮಕ್ಕಿನಿಂದಲೇ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿಯೂ ಮಮತಾ ಹೇಳಿಕೊಂಡಿದ್ದಾರೆ.
ಕಳೆದ ಪಾಲಿಕೆ ಚುನಾವಣೆಯಲ್ಲಿ ಮಮತಾ ವಾಸುದೇವ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುನಂದಾ ಅವರು ಸೋಲು ಅನುಭವಿಸಿದ್ದರು.
Comments are closed.