ಡೆಹರಾಡುನ್: ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉತ್ತರಾಖಂಡ್ ತತ್ತರಿಸಿದೆ. ರಾಜ್ಯದ ಹಲವು ಪ್ರಮುಖ ಮಾರ್ಗಗಳಲ್ಲಿ ಸಂಚಾರದ ಅಡಚಣೆಯುಂಟಾಗಿದ್ದು ಸುಮಾರು 135 ಮಾರ್ಗಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಮಂದಾಕಿನಿ, ಭಾಗೀರತಿ, ಪಿಂಡರ, ಅಲಕನಂದಾ, ಭಾಗೀರತಿ, ಗಂಗಾ ಹಾಗೂ ಕಾಳಿ ನದಿಗಳ ನೀರು ಅಪಾಯಮಟ್ಟವನ್ನು ತಲುಪಿದ್ದು, ಜನಜೀವನ ಅಸ್ಥವ್ಯಸ್ಥಗೊಂಡಿದೆ. ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸುವ ಕಾರ್ಯ ನಡೆಯುತ್ತಿದೆ. ಇನ್ನು ಎರಡು ದಿನಗಳ ಕಾಲ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರೀಕರಿಗೆ ಎಚ್ಚರಿಕೆ ನೀಡಲಾಗಿದೆ.
ಉತ್ತರಾಖಂಡದ ಬಹುತೇಕ ನದಿಗಳು ಮಳೆಗೆ ತುಂಬಿಹರಿಯುತ್ತಿದ್ದು ಪುಣ್ಯ ಕ್ಷೇತ್ರಗಳ ಯಾತ್ರೆೆಗಳನ್ನು ರದ್ದುಗೊಳಿಸಲಾಗಿದೆ. ಚಾರ್ ಧಾಮ್ ಯಾತ್ರೆೆ ಸೇರಿದಂತೆ ಗಂಗೋತ್ರಿ, ಯಮುನೋತ್ರಿ, ಬದ್ರಿನಾಥ , ಕೇದಾರನಾಥ ಪುಣ್ಯಕ್ಷೇತ್ರ ದರ್ಶನಕ್ಕೆೆ ತಡೆಯುಂಟಾಗಿದೆ. ಇಲ್ಲಿ ತೆರಳಬೇಕಾಗಿರುವ ಮಾರ್ಗಗಳು ಜಲಾವೃತಗೊಂಡಿದ್ದು ಸಂಚಾರವನ್ನು ತಡೆಹಿಡಿಯಲಾಗಿದೆ.
ರಾಷ್ಟ್ರೀಯ
Comments are closed.