ಟೋಕಿಯೊ: ಜಪಾನ್‌ನಲ್ಲಿ ವ್ಯಕ್ತಿಯೊಬ್ಬ ಟ್ಯಾಕ್ಸಿಯಲ್ಲಿ 850 ಕಿ.ಮೀ ಪ್ರಯಾಣಿಸಿ ನಂತರ ಅದಕ್ಕೆ ಹಣ ಕೊಡದ ಕಾರಣ ಆತನನ್ನು ಬಂಧಿಸಲಾಗಿದೆ.
ತಕಾಫುಮಿ ಅರಿಮಾ(26) ಎಂಬಾತ ನಿರುದ್ಯೋಗಿಯಾಗಿದ್ದು, ಯೊಕೊಹಮಾ ಪ್ರದೇಶದಿಂದ ಟ್ಯಾಕ್ಸಿ ಮಾಡಿಕೊಂಡು ಮತ್ಸ್ಯುಯಮಾಗೆ ಹೋಗಿದ್ದಾನೆ.
ತನ್ನ ಸ್ಥಳ ತಲುಪಿದ ಮೇಲೆ 2,70,000ಯೆನ್ ಹಣ ನೀಡುವಂತೆ ಟ್ಯಾಕ್ಸಿ ಚಾಲಕ ಕೇಳಿದ್ದಾನೆ. ಆದರೆ ಅರಿಮಾ ನನ್ನ ಬಳಿ ಹಣವಿಲ್ಲ ಎಂದಿದ್ದಾನೆ. ತಕ್ಷಣ ಚಾಲಕ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಅರಿಮಾನನ್ನು ಬಂಧಿಸಿದ್ದಾರೆ. ಆದರೆ ಆತ ಪ್ರಯಾಣ ಬೆಳೆಸಿದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Comments are closed.