https://youtu.be/WDiJSh9DrQE
ಶ್ರೀನಗರ: ಇಡೀ ದೇಶವ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದರೆ ಅತ್ತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮಾತ್ರ ಪಾಕಿಗಳ ಉದ್ಧಟನ ಮುಂದುವರೆದಿದ್ದು, ದುಷ್ಕರ್ಮಿಗಳು ಮೊಬೈಲ್ ಟವರ್ ಮೇಲೆ ಪಾಕಿಸ್ತಾನಿ ಧ್ವಜ ಹಾರಿಸಿದ್ದು, ಇದನ್ನು ಕಂಡ ಭಾರತೀಯ ಯೋಧನೋರ್ವ ಪ್ರಾಣದ ಹಂಗು ತೊರೆದು ಕೂಡಲೇ ಟವರ್ ಏರಿ ಪಾಕಿಸ್ತಾನ ಧ್ವಜವನ್ನು ತೆಗೆದು ಹಾಕಿ ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧ್ವಜ ಹಾರಿಸಿದ ಯೋಧ ಭಾರತೀಯ ಸೇನಾ ಸಮವಸ್ತ್ರದಲ್ಲಿದ್ದಾನೆ. ವಿಡಿಯೋದಲ್ಲಿ ಹೇಳಿಕೊಂಡಿರುವಂತೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ನಲ್ಲಿ ಈ ಪ್ರಚೋದನಾತ್ಮಕ ಘಟನೆ ನಡೆದಿದ್ದು, ಯೋಧನ ಈ ಸಾಹಸ ಕಾರ್ಯಕ್ಕೆ ದೇಶಾಧ್ಯಂತ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ. ಮೂಲಗಳ ಪ್ರಕಾರ ತ್ರಿವರ್ಣ ಧ್ವಜ ಹಾರಿಸಿದ ಯೋಧ ಸಿಆರ್ ಪಿಎಫ್ ಯೋಧ ಸೆಪೋಯ್ ಸಚಿನ್ ಎಂದು ತಿಳಿದುಬಂದಿದ್ದು, ಈತನ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವ್ಯಾಪಕ ಬೆಂಬಲ ಮತ್ತು ಶ್ವಾಘನೆ ವ್ಯಕ್ತವಾಗಿದೆ.
ಯೋಧನ ಈ ಸಾಹಸಗಾಥೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವೀಟರ್ ಮತ್ತು ವಾಟ್ಸಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
Comments are closed.