ಕರ್ನಾಟಕ

ಅಸಂಪ್ರದಾಯಿಕ ಉದ್ಯೋಗದತ್ತ ಆಕರ್ಷಿತರಾದ ಮಹಾನಗರಿ ಮಹಿಳೆಯರು.

Pinterest LinkedIn Tumblr

mumbai_ladias_sharp

ಮುಂಬೈ, ಜೂ.07 : ಮಹಾನಗರಗಳಲ್ಲಿ ಅಸಂಪ್ರದಾಯಿಕ ಉದ್ಯೋಗದತ್ತ ಮಹಿಳೆಯರು ಆಕರ್ಷಿತರಾಗುತ್ತಿದ್ದಾರೆ. ಇದುವರೆಗೂ ಕೇವಲ ಪುರುಷರಿಗೆ ಮೀಸಲಾಗಿದ್ದ ಕ್ಯಾಬ್ ಚಾಲಕರು, ಸೆಕ್ಯೂರಿಗಾರ್ಡ್ ಮತ್ತಿತರ ಕೆಲಸಗಳಿಗೆ ಸ್ತ್ರೀಯರು ಮುಗಿಬೀಳುತ್ತಿದ್ದಾರೆ. ಮಹಾನಗರಗಳಲ್ಲಿ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಕೆಲಸಗಳತ್ತ ಮಹಿಳೆಯರು ಆಕರ್ಷಿತರಾಗುತ್ತಿದ್ದು, ತಮ್ಮ ಸಾಂಪ್ರದಾಯಿಕತ್ವಕ್ಕೆ ತಿಲಾಂಜಲಿ ನೀಡಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ದುಡಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಬಾಬಾಜಾಬ್ ಸಂಸ್ಥೆಯ ಮುಖ್ಯಸ್ಥ ವೀರ್ಕಶ್ಯಪ್.

ವಿದೇಶಗಳಲ್ಲಿ ಮಾತ್ರ ಪುರುಷರು ಮಾಡುವಂತಹ ಕೆಲಸಗಳನ್ನು ಮಹಿಳೆಯರು ಮಾಡುತ್ತಿದ್ದರು. ಇಂತಹ ವಾತಾವರಣ ಸಾಂಪ್ರದಾಯಿಕ ಭಾರತದಲ್ಲಿ ಇರಲಿಲ್ಲ. ಆಧುನಿಕತೆ ಬೆಳೆದಂತೆ ಭಾರತೀಯ ನಾರಿಯರು ಸಾಂಪ್ರದಾಯಿಕತ್ವಕ್ಕೆ ತಿಲಾಂಜಲಿ ನೀಡಿ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯಲು ಮುಂದೆ ಬರುತ್ತಿರುವುದು ಉತ್ತಮವಾದ ಬೆಳವಣಿಗೆ. ಇದರಿಂದ ದೇಶದ ಆರ್ಥಿಕತೆಯೂ ವೃದ್ಧಿಯಾಗುತ್ತದೆ ಎನ್ನುತ್ತಾರೆ ಅವರು. 2015-16ರಲ್ಲಿ ಇದ್ದ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ 7ಪಟ್ಟು ಹೆಚ್ಚಾಗಿದೆ. ಚಾಲನಾ ವರ್ಗದಲ್ಲಿ ಶೇ.153ರಷ್ಟು ಏರಿಕೆಯಾಗಿದೆ ಎಂದು ಅಂಕಿ-ಅಂಶ ನೀಡುತ್ತಾರೆ ಕಶ್ಯಪ್.

ಅದರಲ್ಲೂ ಮುಖ್ಯವಾಗಿ ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿರುವ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ದುಡಿಯುವ ಕೆಲಸಗಳತ್ತ ಆಕರ್ಷಿತರಾಗುತ್ತಿದ್ದು, ದೇಶದಲ್ಲಿ 6ಮಿಲಿಯನ್ ಮಹಿಳೆಯರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, 3.25ಲಕ್ಷಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಉದ್ಯೋಗದಲ್ಲಿದ್ದಾರೆ.

Comments are closed.